148. Great Pied Hornbill (Buceros bicornis) R Kite ದೊಡ್ಡ ದಾಸಮಂಗಟ್ಟೆ (ಮಲೇರಪ್ಪ)

130 ಸೆಂಮೀ. ಎಲ್ಲಕ್ಕಿಂತ ದೊಡ್ಡ ಗಾತ್ರದ ಕ್ಪ-ಬಿಳಿ ಬಣ್ಣದ ಮಂಗಟ್ಟೆ; ಕ್ಪ ಮುಖ, ಮೇಲ್ಮೈ ಮತ್ತು ಕೆಳಮೈ; ಹಳದಿ-ಕ್ಪ ಕೊಕ್ಕು ಮತ್ತು ಕೋಡು; ಬಿಳಿ ಕತ್ತು, ಗಂಟಲು, ಕಿಬ್ಬೊಟ್ಟೆ; ರೆಕ್ಕೆಯ ಮೇಲೆ ಎರಡು ಬಿಳಿ ಪಟ್ಟಿ; ಬಿಳಿಬಾಲದಲ್ಲಿ ಅಗಲವಾದ ಕ್ಪ ಅಡ್ಡಪಟ್ಟಿ; ಬಾಲದ ಬುಡದಲ್ಲಿ ಸ್ರವಿಸುವ ದ್ರವದಿಂದಾಗಿ ಕತ್ತು ತಿಳಿಹಳದಿ. ದಟ್ಟ ಅರಣ್ಯವಾಸಿ; ಸದಾಹಸಿರು, ತೇವವುಳ್ಳ ಉದುರೆಲೆ ಕಾಡು ಇದರ ವಾಸಸ್ಥಳ; ಒತ್ತಾದ ಹಣ್ಣಿನ ಮರಗಳಿರುವ ಎಸ್ಟೇಟುಗಳಿಗೂ ನುಸುಳುವುವು. ಗಟ್ಟಿಯಾದ, ಪ್ರತಿಧ್ವನಿಸುವ ಹೆ.ಹ್ಹೆ.ಹ್ಹೆ.ಹ್ಹೆ.. ಕೂಗು. ನಿರಂತರ ಬೇಟೆಯ ಕಾರಣದಿಂದ ವಿನಾಶದ ಅಂಚಿನಲ್ಲಿರುವ ಹಕ್ಕಿ.