Barbets  (Capitonidae)

 

ಕುಟ್ರಹಕ್ಕಿಗಳು (ಕುಡ್ಕ್ಪಕ್ಷಿ)

 

ಮಲೆನಾಡಿನ ಕಾಡುಗಳಲ್ಲೆಲ್ಲ ದಿನರ್ತಿ ಕೇಳುವ ಸುಪರಿಚಿತ ಕುಟ್ರೂ..ಕುಟ್ರೂ.. ಕೂಗು, ಈ ಕುಟ್ರಹಕ್ಕಿಗಳದ್ದು. ನಮ್ಮಲ್ಲಿ ಕಂಡುಬರುವ ಮತ್ತೆರಡು ಸಣ್ಣ ಗಾತ್ರದ ಕುಟ್ರಹಕ್ಕಿಗಳು ಟ್ಂಕ್.ಟ್ಂಕ್… ಎಂದು ಕಮ್ಮಾರನು ಪಾತ್ರೆ ಕುಟ್ಟುವ ರೀತಿ ಕೂಗುತ್ತವೆ. ಎಲೆಹಸಿರು ಬಣ್ಣದ ದೇಹ; ಒಟ್ಟಾರೆ ಎಲೆಗಳ ಮಧ್ಯೆ ಮರೆಮಾಚುವ ಬಣ್ಣ; ದಪ್ಪನಾದ, ತುಸು ಬಾಗಿದ ಕೊಕ್ಕು; ಕೊಕ್ಕಿನ ಬುಡದಲ್ಲಿ ಉದ್ದನಾದ ಮೀಸೆ; ಗಟ್ಟಿಮುಟ್ಟಾದ ಸಣ್ಣ ಕಾಲುಗಳು; ಎರಡು ಬೆರಳು ಮುಂದೆ, ಎರಡು ಹಿಂದೆ; ಗುಂಡಾದ ರೆಕ್ಕೆಗಳು; ಚಿಕ್ಕ, ಏಣು ಸವರಿದಂತ ಬಾಲ. ಹಣ್ಣುಗಳೆಂದರೆ ಬಹಳ ಇಷ್ಟ, ಅದರಲ್ಲೂ ಕಾಫಿ, ಏಲಕ್ಕಿ ಎಸ್ಟೇಟುಗಳಲ್ಲಿರುವ ಆಲ, ಅರಳಿ, ಬಸರಿ ಹಣ್ಣುಗಳೆಂದರೆ, ಗುಂಪಾಗಿ ಬಂದು ಔತಣ ಕೂಟದಲ್ಲಿ ಭಾಗವಹಿಸುತ್ತವೆ; ಅಲ್ಲದೆ ಕೀಟಗಳು, ಸಣ್ಣ ಜೀವಿಗಳು ಮತ್ತು ಹೂ ಮಕರಂದವೇ ಆಹಾರ. ಕೊಕ್ಕಿನ ಬುಡದಲ್ಲಿರುವ ಕೂದಲಿನಲ್ಲಿ ಪರಾಗಗಳು ಅಂಟಿಕೊಂಡು, ಪರಾಗಸ್ಪರ್ಶದಲ್ಲಿ ಭಾಗವಹಿಸುತ್ತವೆ. ಮರದ ಟರೆಗಳೊಳಗೆ ಗೂಡು.

 

150. White-cheeked Barbet (Megalaima viridis) Small Green Barbet R Myna-  ಸಣ್ಣ ಕುಟ್ರ (ಕುಟ್ರುಪಕ್ಷಿ)

23 ಸೆಂಮೀ. ನಮ್ಮಲ್ಲಿ ಸಾಮಾನ್ಯವಾಗಿ ಕಂಡುಬರುವ ಎಲೆಹಸಿರು ಹಕ್ಕಿ. ಬಿಳಿ ಗೀರುಗಳಿರುವ  ಕಂದು ತಲೆ ಮತ್ತು ಎದೆ; ಕೆನ್ನೆಯ ಮೇಲೆ ಬಿಳಿ ಮಚ್ಚೆಗಳು. ಕಣ್ಣಿನ ಸುತ್ತ ಕ್ಪ ನಗ್ನ ಉಂಗುರ; ಬಿಳಿ ಗಲ್ಲ, ಬೆನ್ನ ಮೇಲೆ ಕಂದು ಗೀರುಗಳು. ಸದಾಹಸಿರು, ತೇವ-ಉದುರೆಲೆ ಕಾಡು, ಎಸ್ಟೇಟು, ಉದ್ಯಾನವನಗಳಲ್ಲಿ ವಾಸ. ಇಡೀ ಕಾಡು ತುಂಬುವ ಹಾಗೆ, ಒಂದರಮೇಲೆ ಒಂದರಂತೆ ಕುಟ್ರ್.ರ್…ಕುಟ್ರೂ.ಕುಟ್ರೂ.. ಕೂಗು. ಬೀಜ ಪ್ರಸರಣದಲ್ಲಿ ಮೇರು ಪಾತ್ರ.