152. Crimson-throated Barbet (Megalaima rubricapillus): R Bulbul- ಕೆಂಕತ್ತಿನ ಕಂಚುಕುಟಿಗ (ಕುಡ್ಕ್)

17 ಸೆಂಮೀ. ಎಲೆಹಸಿರು ಹಕ್ಕಿಗೆ ತಿಳಿನೀಲಿ ಕೆನ್ನೆ, ಎದೆ; ಮುಖವನ್ನು ಕುಂಕುಮದಲ್ಲಿ ಅದ್ದಿ ತೆಗೆದಂತೆ, ಎದ್ದುಕಾಣುವ ಕೆಂ ನೆತ್ತಿ, ಹಣೆ, ಗಲ್ಲ. ನಿಮಿಷಕ್ಕೆ 100ರಿಂದ 120 ಬಾರಿ ಟ್ಂಕ್..ಟ್ಂಕ್… ಕೂಗು. ಗುಂಪಿನಲ್ಲಿ ಸದಾಹಸಿರು, ಉದುರೆಲೆ, ಕುರುಚಲು ಕಾಡು, ಎಸ್ಟೇಟು, ಜನವಸತಿ ಮುಂತಾದೆಡೆ ವಾಸ. ಎತ್ತರದ ಮರದ ತುದಿಯಲ್ಲಿ ಕುಳಿತು, ಅತ್ತಿತ್ತ ನೋಡುತ್ತಾ ಕೂಗುತ್ತಿರುವಾಗ ಕಾಣುವುದೇ ದುಸ್ಸಾಧ್ಯ!