Woodpeckers (Picidae)

 

ಮರಕುಟಿಗಗಳು (ಮರಕೊಟ್ಟ)

 

ದೇಹಕ್ಕೆ ದೊಡ್ಡದೆನಿಸುವ ತಲೆಗೆ, ಉಳಿಯಂತೆ ದಪ್ಪ, ಉದ್ದ ಹಾಗೂ ಗಟ್ಟಿಮುಟ್ಟಾದ ಕೊಕ್ಕು ಮರವನ್ನು ಕುಕ್ಕಿ, ತೊಗಟೆಯನ್ನು ಸೀಳಲು ತಕ್ಕುದಾಗಿದೆ. ಒಳಗಿರುವ ಕೀಟ, ಮರಿಹುಳಗಳನ್ನು ಹೆಕ್ಕಿ ತಿನ್ನಲು ಅನುಕೂಲವಾದ, ಮುಳ್ಳುತುದಿಯ, ಉದ್ದವಾದ ನಾಲಿಗೆ; ಸಣ್ಣದಾದರೂ, ಶಕ್ತಿಯುತವಾದ ಕತ್ತು; ಚಿಕ್ಕದಾದರೂ ಬಲಿಷ್ಟವಾದ ಕಾಲು ಮತ್ತು ಕಾಲ್ಬೆರಳುಗಳು; ಎರಡು ಬೆರಳು ಮುಂದೆ, ಎರಡು ಹಿಂದೆ; ಎಲ್ಲಕ್ಕಿಂತ ಹೆಚ್ಚಾಗಿ, ರಭಸವಾಗಿ ಕುಕ್ಕುವಾಗ, ಆಧಾರಕ್ಕೆ ಮೂರನೆ ಕಾಲಿನಂತಿರುವ ಬೆಣೆಯಂತಹ ಬಾಲ, ಮರವನ್ನಾತು ಕುಳಿತು ಕೊಕ್ಕಿನಿಂದ ಕುಕ್ಕಲು ಸಹಕಾರಿ; ಆಾತವನ್ನು ತಡೆದುಕೊಳ್ಳಬಲ್ಲ ಮುಖದ ಸ್ನಾಯುಗಳು ಮೆದುಳಿಗೆ ರಕ್ಷಣೆ ನೀಡುತ್ತವೆ. ಗಂಡು-ಹೆಣ್ಣು ನೋಡಲು ವಿಭಿನ್ನ. ಮರದ ಮೇಲೆ ಕುಪ್ಪಳಿಸುತ್ತ, ಸುರುಳಿಯಾಗಿ ಹತ್ತುತ್ತಾ, ಇಳಿಯುತ್ತಾ, ಮರವನ್ನು ಆಗಾಗ ಕುಟ್ಟಿ, ಶಬ್ದದಿಂದ ಟೊಳ್ಳು ಕಾಂಡವನ್ನೂ, ಅದರೊಳಗಿರುವ ಜೀವಿಗಳ ಇರವನ್ನೂ ಪತ್ತೆಹಚ್ಚಬಲ್ಲವು. ನೇರವಾದ, ವೇಗದ, ಅಲೆಯಂತಹ ಹಾರಾಟ. ಕೀಟ, ಮರಿಹುಳಗಳಲ್ಲದೆ, ಹಣ್ಣುಗಳು, ಹೂ ಮಕರಂದ ಇವೆಲ್ಲ ಆಹಾರದ ಪಟ್ಟಿಯಲ್ಲಿವೆ. ಸಂತಾನ ಋತುವಿನಲ್ಲಿ ಮರಕುಟ್ಟುವುದು ಹೆಚ್ಚು. ಮರದ ಟರೆಗಳೊಳಗೆ ಹೆಚ್ಚೇನೂ ಆಡಂಬರವಿಲ್ಲದ ಗೂಡು.

 

154. Greater Golden-backed Woodpecker (Chrysocolaptes lucidus) Large Golden-backed Woodpecker R Pigeon- ದೊಡ್ಡ ಹೊಂಬೆನ್ನಿನ ಮರಕುಟಿಗ (ಬಲ್ಯ ಮರಕುಟಿಕು)

33 ಸೆಂಮೀ. ಹೊಂಬಣ್ಣದ ಮೇಲ್ಮೈಗೆ ಕೆಂ ನೆತ್ತಿ, ಜುಟ್ಟು; ಬಿಳಿ-ಕ್ಪ ಗಂಟಲು, ಮುಖ; ಬಿಳಿ ಕೆಳಮೈ ಮೇಲೆ ಕ್ಪ ಚುಕ್ಕೆ-ಮಚ್ಚೆಗಳು; ಕೆಂ ಪೃಷ್ಠ; ಕ್ಪ ಬಾಲ ಮತ್ತು ಹಾರುರೆಕ್ಕೆಗಳು. ಎಸ್ಟೇಟುಗಳಲ್ಲಿ, ಮರಗಳ ಮೇಲೆ ಓಡಾಟ. ಮರಕುಟ್ಟುವ ಶಬ್ದವಲ್ಲದೆ, ಹಾರುವಾಗ, ಗಟ್ಟಿಯಾದ ಕಿರ್ರೆನ್ನುವ ಕೂಗು.