159. Rufous Woodpecker (Celeus brachyurus) R Myna+ ಕಂದು ಮರಕುಟಿಗ (ಉರ್ಪ್ ಮರಕೊಟ್ಟ)

25 ಸೆಂಮೀ. ಕೆಂಗಂದು ಮೈ; ರೆಕ್ಕೆ-ಬಾಲದಲ್ಲಿ ಕ್ಪ ಗೀರುಗಳು; ಗಂಡಿಗೆ ಕಣ್ಣಿನ ಕೆಳಗೆ ಕೆಂ ಬಣ್ಣದ ಅರ್ಧಚಂದ್ರ ಮಚ್ಚೆ. ಕ್ರಿಮೆಟೋಗಾಸ್ಟರ್ ಪ್ರಭೇದದ ಕೆಂಚಿರುವೆ ಗೂಡಿನಲ್ಲಿ ಮೊಟ್ಟೆಯಿಟ್ಟು, ಮರಿಗಳನ್ನು ಸಾಕುತ್ತವೆ; ಅವು ಇರುವೆಗಳ ಮೊಟ್ಟೆ ಮತ್ತು ಮರಿಹುಳಗಳನ್ನೇ ತಿಂದರೂ, ಈ ಕ್ರೂರ ಇರುವೆಗಳು ಮೌನವಾಗಿ ಸಹಿಸಿಕೊಂಡಿರುವುದು ಆಶ್ಚರ್ಯದ ಸಂಗತಿ. ಕ್ನ್ ಕ್ನ್ ಕ್ನ್.. ಉಚ್ಚಸ್ವರದ, ವೇಗಗತಿಯ ಕೂಗು.