163. Brown-capped Pigmy Woodpecker (Dendrocopos nanus) Pigmy Woodpecker R Sparrow-  ಚಿಟ್ಟು ಮರಕುಟಿಗ (ಕ್ರ್ ಮರಕೊಟ್ಟ)

14 ಸೆಂಮೀ. 159ರ ಚಿಕ್ಕ ರೂಪ. ಗಂಡಿಗೆ ಕಡುಗಂದು-ಬಿಳಿ ಪಟ್ಟೆಗಳುಳ್ಳ ಮೇಲ್ಮೈ; ಎದ್ದುಕಾಣುವ ಬಿಳಿಹುಬ್ಬು, ನೆತ್ತಿಯ ಎರಡೂ ಬದಿಗಳಲ್ಲಿ ಚಿಕ್ಕ ಕೆಂ ಮಚ್ಚೆಗಳು; ಮಾಸಲು ಬಿಳಿ ಕೆಳಮೈ ಮೇಲೆ ಕಂದು ಉದ್ದ ಗೀರುಗಳು. ಹೆಣ್ಣಿಗೆ ಕೆಂ ಮಚ್ಚೆಗಳಿಲ್ಲ. ಇತರ ಮರಕುಟ್ಟಿಗಗಳ ಸ್ವಭಾವ. ಸದಾಹಸಿರು, ಉದುರೆಲೆ ಕಾಡು, ಎಸ್ಟೇಟುಗಳಲ್ಲಿ ವಾಸ. ಮೆದು-ಕೀಚಲು ಧ್ವನಿಯಲ್ಲಿ ಚ್ಕ್.ರ್ರ್.. ಕೂಗು.