Pittas  (Pittidae)

 

ನವರಂಗಗಳು (ಓಣಿಕುಂಯ್ಕ)

 

ದುಂಡುದೇಹದ, ನೆಲದ ಮೇಲೆ ಒಂಟಿಯಾಗಿ ಓಡಾಡುವ, ಉಜ್ವಲ ಬಣ್ಣಗಳುಳ್ಳ, ಗಿಡ್ಡಕತ್ತಿನ ಹಕ್ಕಿಗಳು. ಗಟ್ಟಿಮುಟ್ಟಾದ, ತುಸು ಬಾಗಿದ ಕೊಕ್ಕು; ನೀಳ, ಬಲಿಷ್ಟ ಕಾಲುಗಳು, ಸಣ್ಣ, ಉರುಟಾದ ರೆಕ್ಕೆಗಳು; ಮೊಂಡುಬಾಲ. ಮರಗಳ ಮೇಲೆ ವಿಶ್ರಾಂತಿ; ನೆಲದ ಮೇಲೆ ಅಕಶೇರುಕ, ಕ್ರಿಮಿ-ಕೀಟ, ಮರಿಹುಳಗಳ ಬೇಟೆ. ಸ್ನಿಗ್ಧ, ಕಿವಿಗೆ ಇಂಪಾದ ಸಿಳ್ಳೆ. ನೆಲದ ಮೇಲೆ ಗೂಡು.

 

167. Indian Pitta (Pitta brachyura) LM Quail+/- ನವರಂಗ (ಮರ ಓಣಿಕುಂಯ್ಕ)

19 ಸೆಂಮೀ. ಉಜ್ವಲ ನೀಲಿ, ಹಸಿರು, ಬಿಳಿ, ಕ್ಪ ಮತ್ತು ಬೂದು ಮೇಲ್ಮೈ; ಕಣ್ಣಿಗೆ ಕ್ಪ ಪಟ್ಟಿ; ಕ್ಪ ನೆತ್ತಿ; ಬಿಳಿ ಗಲ್ಲ; ತಿಳಿ ಹಸಿರುಗಂದು ಕೆಳಮೈಗೆ, ಕೆಂ ಕಿಬ್ಬೊಟ್ಟೆ; ಹಾರುವಾಗ ರೆಕ್ಕೆಗಳ ತುದಿಯಲ್ಲಿ ಬಿಳಿ ಮಚ್ಚೆ ಸ್ಪಷ್ಟ. ಕಾಡು, ಎಸ್ಟೇಟುಗಳ ನೆಲದ ಮೇಲೆ, ಕುಪ್ಪಳಿಸಿಕೊಂಡು, ತರಗೆಲೆಗಳನ್ನು ಮೊಗಚುತ್ತಾ, ಬಾಲವನ್ನು ಮೇಲೆಕ್ಕೂ-ಕೆಳಕ್ಕೂ ಆಡಿಸುತ್ತಾ ಬೇಟೆ ಹುಡುಕುತ್ತವೆ. ಬೆಳಿಗ್ಗೆ-ಸಂಜೆ, ಎರಡು ಸ್ವರದ, ಮಾಧುರ್ಯಭರಿತ ವೀ..್ಯ. ಸಿಳ್ಳು; ಅದಕ್ಕೆ ವಿವಿಧ ದಿಕ್ಕುಗಳಿಂದ ಮತ್ತೆರಡು ಹಕ್ಕಿಗಳ ಮರುತ್ತರ. ನೆಲದ, ತಗ್ಗಿನ ಗಿಡಗಳ ಮೇಲೆ, ಕಡ್ಡಿ-ಹುಲ್ಲಿನ ಗೂಡು.