Larks (Alaudidae)

 

ನೆಲಗುಬ್ಬಿಗಳು (ಜುಟ್ಟ್ಪಕ್ಷಿ)

 

ಒಣಹುಲ್ಲು ಬಣ್ಣದ, ನೋಡಲು ಹೆಣ್ಣು ಗುಬ್ಬಚ್ಚಿಯಂತೆ ಕಾಣುವ, ನೀಳ-ಚೂ ರೆಕ್ಕೆಯಿದ್ದು, ವೇಗದ ಹಾರಾಟವುಳ್ಳ, ನೆಲದ ಹಕ್ಕಿಗಳು. ಅಗಲವಾದ, ಉದ್ದವಾದ, ಚೂಪಾದ ರೆಕ್ಕೆಗಳು; ಟ್ಟ ಬಾಲ. ಗುಂಪಾಗಿ, ತೆರವು ಪ್ರದೇಶಗಳಲ್ಲಿ, ಅತ್ತಿತ್ತ ಓಡಾಡಿಕೊಂಡು ನೆಲದ ಮೇಲಿನ ಕಾಳು, ಬೀಜ, ಧಾನ್ಯ ಮತ್ತು ಕೀಟಗಳನ್ನು ಅರಸುತ್ತವೆ. ಆದರೂ ಮರೆಮಾಚುವ ಮೈಬಣ್ಣದಿಂದ ಕಣ್ಣಿಗೆ ಕಾಣುವುದೇ ಕಷ್ಟ. ಆಹಾರ. ಸುಶ್ರಾವ್ಯ ಹಾಡುಗಾರರು. ಒಮ್ಮೆಲೇ ಮೇಲಕ್ಕೆ ಹಾರಿ, ಸಿಳ್ಳೆ ಹಾಕಿಕೊಂಡು ಸರ್ರನೆ ಕೆಳಕ್ಕಿಳಿಯುವ ಸ್ವಭಾವ. ನೆಲವನ್ನು ಕೆರೆದು, ಮಾಡಿದ ಸಣ್ಣ ಹಳ್ಳದಲ್ಲಿ ಗೂಡು.

 

168. Singing Bush-Lark  (Mirafra cantillans) R Sparrow+/- ಭಾರದ್ವಾಜ (ಬಾರದ್ವಾಜ)

15 ಸೆಂಮೀ. ಹಳದಿಗಂದು ದೇಹಕ್ಕೆ, ಕಂದು ಗೀರುಗಳು; ತಲೆಯ ಮೇಲೆ ಟ್ಟ ಜುಟ್ಟು; ತಿಳಿ ಕೆಳಮೈ ಮೇಲೆ ಕಂದು ಗೀರುಗಳು; ರೆಕ್ಕೆಯಲ್ಲಿ ಕೆಂಗಂದು ಮತ್ತು ಬಾಲದ ಅಂಚಿನಲ್ಲಿ ಬಿಳಿ. ಕುರುಚಲು ಕಾಡು, ಹುಲ್ಲುಗಾವಲು, ಹೊಲಗಳಿರುವೆಡೆ, ನೆಲದಮೇಲೆ, ಜೋಡಿಯಾಗಿ ಕಾಣಬಹುದು. ಕುಳಿತಲ್ಲಿಂದ ಆಗಾಗ ಆಕಾಶಕ್ಕೆ ಚಿಮ್ಮಿ, ತೇಲಿಕೊಂಡು ಕೆಳಗಿಳಿಯುತ್ತದೆ. ಸಂತಾನ ಋತುವಿನಲ್ಲಿ, ಗಂಡುಹಕ್ಕಿಯ ಹಲವು ಮಧುರ ಸ್ವರಗಳ ವಿಶೇಷ ಹಾರುಸಿಳ್ಳೆ; ಅಣಕು ಹಾಡುಗಾರ ಕೂಡ.