Swallows  (Hirundinidae)

 

ಕವಲುತೋಕೆಗಳು (ಕವಟೆಪಕ್ಷಿ)

 

ಆಕಾಶಗುಬ್ಬಿಗಳಂತೆ, ಹಾರುವಾಗ ಎದುರುಗಾಳಿಗೆ ತಡೆಯೊಡ್ಡದ ದೇಹವುಳ್ಳ, ಗುಂಪಾಗಿ ಆಕಾಶದಲ್ಲಿ ಹಾರಾಡಿಕೊಂಡು, ಹಗಲು ಹೊತ್ತು ಕೀಟಗಳನ್ನು ಭಕ್ಷಿಸುವ ಹಕ್ಕಿಗಳು. ಸರ ದೇಹ; ಹಾರುವ ಕೀಟಗಳನ್ನು ಹಾರುತ್ತಲೇ ಕಬಳಿಸಲು ಅಗಲವಾದ ಬಾಯಿ; ಉದ್ದ-ಚೂಪಾದ ರೆಕ್ಕೆಗಳು; ಸಣ್ಣ ದುರ್ಬಲ ಕಾಲುಗಳು; ಆಳವಾಗಿ ಕವಲೊಡೆದ ಬಾಲ. ಹಗಲು ವೇಳೆ ಸದಾ ಹಾರಾಡಿಕೊಂಡೇ ಇರುವ ಈ ಹಕ್ಕಿಗಳು ಅಪರೂಪಕ್ಕೊಮ್ಮೆ ವಿಶ್ರಮಿಸಿಕೊಳ್ಳಲು ತಂತಿಯ ಮೇಲೆ ಕೂರುತ್ತವೆ. ನೆಲದ ಮೇಲೆ ಅಂಕು-ಡೊಂಕಾದ ನಡೆ. ವೇಗವಾದ, ಶಕ್ತಿಯುತ, ಹಾರಾಟ. ಹಾರುವಾಗ ಹಲವು ತೀವ್ರ ರೆಕ್ಕೆ ಬಡಿತ, ನಂತರ ಚಿತ್ತಾಕರ್ಷಣೀಯ ತೇಲಾಟ! ಜೊಲ್ಲು ಮತ್ತು ಹಸಿಮಣ್ಣಿನ ಹೆಂಟೆಗಳನ್ನು ಕಲೆಸಿ ಕಟ್ಟಡಗಳ, ಕಲ್ಲುಬಂಡೆಗಳ ಮೇಲೆ ಅಂಟಿಸಿದ ಅಥವಾ ಬದುಗಳಲ್ಲಿ ಕೊರೆದ ತೂತುಗಳೊಳಗೆ ಸಾಮೂಹಿಕ ಗೂಡು.

173. Common Swallow (Hirundo rustica) Swallow ? M Sparrow+/- ಕವಲುತೋಕೆ (ಕವಟೆಪಕ್ಷಿ)

18 ಸೆಂಮೀ. ಕಡುನೀಲಿ ಮೇಲ್ಮೈ; ಕೆಂಗಂದು ಹಣೆ, ಗಂಟಲು; ಕ್ಪ ಎದೆಪಟ್ಟಿ; ಬಿಳಿ ಕೆಳಮೈ; ಆಳವಾಗಿ ಸೀಳಿದ ಚೂಬಾಲ. ತಂತಿಯ ಮೇಲೆ ಸಾಲಾಗಿ ಕುಳಿತು ಚಕ್ಕಂದ ಹೊಡೆಯುತ್ತಲೋ, ಆಕಾಶದಲ್ಲಿ ಹಾರಾಡುತ್ತ ಕೀಟಗಳನ್ನು ಕಬಳಿಸುತ್ತಲೋ ಇರುವುದನ್ನು ಕಾಣಬಹುದು. ನೀರಿನ ಬಳಿಯ ಜೊಂಡಿನಲ್ಲಿ ತಂಗುವಿಕೆ. ಮೆದುಸ್ವರದಲ್ಲಿ ಉಲಿತ. ಕಾಶ್ಮೀರ-ಈಶಾನ್ಯ ಭಾರತದಿಂದ ಚಳಿಗಾಲದ ವಲಸೆಗಾರರು.