177. Dusky Crag-Martin (Hirundo concolor) R Sparrow- ಕಂದುಗ್ಪ ಕಮರಿತೋಕೆ

13 ಸೆಂಮೀ. ಮಸಿಗಂದು ದೇಹ; ಉದ್ದ ರೆಕ್ಕೆ, ಗಿಡ್ಡ-ಮೊಂಡು ಬಾಲ; ಬಾಲದ ಮೇಲೆ, ನಡು ಮತ್ತು ಹೊರಗರಿಗಳನ್ನು ಬಿಟ್ಟು, ಉಳಿದ ಗರಿಗಳ ಮೇಲೆ ಬಿಳಿ ಮಚ್ಚೆಗಳು; ಮಾಸಲು ಕೆಳಮೈ. ಸಣ್ಣ ಗುಂಪಿನಲ್ಲಿ ಸಂಭ್ರಮದಿಂದ ಮೆಲುದನಿಯಲ್ಲಿಚಿಲಿಪಿಲಿ ಹಾಡುತ್ತಾ ಕೀಟಗಳನ್ನರಸುತ್ತವೆ. ಎತ್ತರದ ಕಟ್ಟಡ-ಬಂಡೆಗಳ ಗೋಡೆಯ ಮೇಲೆ ಮಣ್ಣು, ನಾರು, ಮೆದುಗರಿಗಳಿಂದ ತಯಾರಾದ ಗೂಡು.