Shrikes (Laniidae)

 

ಕಳಿಂಗಗಳು (ಕಾಡ್ಯಕಣ್ಣಿ)

 

ಧೈರ್ಯವಂತ, ಬುದ್ಧಿವಂತ, ತೆರೆದ ಪ್ರದೇಶ-ಕುರುಚಲುಗಾಡುಗಳಲ್ಲಿ ವಾಸಮಾಡುವ ಕ್ರೂರ, ಬೇಟೆ ಹಕ್ಕಿಗಳು. ದೊಡ್ಡ ತಲೆಗೆ ಗಟ್ಟಿಮುಟ್ಟಾದ ಕೊಕ್ಕೆ ಕೊಕ್ಕು; ಕಣ್ಣಿಗೆ ಅಗಲವಾದ ಕ್ಪ ಪಟ್ಟಿ; ದೂರದಿಂದಲೂ ಗುರುತಿಸಬಹುದಾದ ಬಿಳಿಯಾದ ಕೆಳಮೈ; ಧೃಢವಾದ ಕಾಲು, ಪಾದ ಮತ್ತು ಚೂಪಾದ ಕಾಲುಗುರುಗಳು; ನೀಳ, ಸರ, ಪಟ್ಟೆ ಬಾಲ. ಒಣರೆಂಬೆ, ಬೇಲಿಯ ಕಂಬ ಅಥವಾ ತಂತಿಯ ಮೇಲೆ ಕುಳಿತು ಬೇಟೆಯನ್ನು ಹೊಂಚುತ್ತವೆ. ಕೀಟ, ಹಲ್ಲಿ, ಇಲಿ ಮುಂತಾದ ಮಾಂಸಾಹಾರ; ಬೇಟೆ ಅಧಿಕವಾದಲ್ಲಿ, ಮುಳ್ಳಿಗೆ ಕೀಟಗಳನ್ನು ಸಿಕ್ಕಿಸಿಟ್ಟು, ಆರಾಮವಾಗಿ ಕಬಳಿಸುವ ಸ್ವಭಾವ. ಚರ್ರ್..ಕರ್ರ್..ಕ್ರ್ಯಾಕ್.. ಕೂಗಲ್ಲದೆ, ಪ್ರಜನನ ಸಮಯದಲ್ಲಿ ಇತರ ಹಕ್ಕಿಗಳ ಸಮರ್ಥ ಅಣಕುಗಾರ. ಮುಳ್ಳುಗಂಟಿಗಳಲ್ಲಿ ಕಡ್ಡಿ, ನಾರು, ಹತ್ತಿಯಿಂದ ಮಾಡಿದ ಆಳವಾದ ಗೂಡು.

 

178. Southern Grey Shrike (Lanius meridionalis) Grey Shrike R Myna+/- ಬೂದು ಕಳಿಂಗ (ಬೂದ್ ಕಾಡ್ಯಕಣ್ಣಿ)

25 ಸೆಂಮೀ. ಬೆಳ್ಳಿಬೂದು ಮೇಲ್ಮೈ; ಕಣ್ಣಿಗೆ ಕಳ್ಳನ ಪಟ್ಟಿ; ಕ್ಪ ರೆಕ್ಕೆಗಳಲ್ಲಿ ಬಿಳಿ ಪಟ್ಟಿಗಳು; ಕ್ಪ-ಬಿಳಿ ಬಾಲ; ಬಿಳಿ ಕೆಳಮೈ. ಕುರುಚಲು, ವಿರಳಕಾಡುಗಲ್ಲಿ, ಮರದ ಮೇಲೋ, ದೆಗಳ ಮೇಲೋ, ತಂತಿಗಳ ಮೇಲೋ ಕುಳಿತು ಬೇಟೆಯನ್ನು ಹೊಂಚುತ್ತದೆ; ನೆಗೆದು ಬೇಟೆಯನ್ನು ಹಿಡಿದು ಕೊಕ್ಕಿನಿಂದ ಸೀಳಿ ತಿನ್ನುತ್ತದೆ. ಕರ್ಕಶ ಕ್ರ್ಯಾಕ್.ಕ್ರ್ಯಾಕ್… ಕೂಗಲ್ಲದೆ ಪ್ರಜನನ ಕಾಲದಲ್ಲಿ ಗಂಡುಹಕ್ಕಿ ಇತರ ಹಕ್ಕಿಗಳ ಅಣಕು ಸ್ವರಗಳನ್ನೂ ಮಾಡುವುದು.