Orioles  (Oriolidae)

 

ಹೊನ್ನಕ್ಕಿಗಳು (ಬಾಳೆಮಂಜ)

ಉಜ್ವಲ ಹೊಂಬಣ್ಣದ, ಸರ ದೇಹದ, ಮರದಲ್ಲಿ ವಾಸಿಸುವ ಹಕ್ಕಿಗಳು. ಉದ್ದವಾದ, ತುಸು ಬಾಗಿದ ಕೊಕ್ಕು; ಅಗಲವಾದ, ಚೂಪಾದ ರೆಕ್ಕೆಗಳು; ಸಣ್ಣ ಕಾಲುಗಳು. ವೇಗವಾದ, ಅಲೆಯಂತಹ ಹಾರಾಟ. ನಾಚಿಕೆ ಸ್ವಭಾವದಿಂದ ಮರದ ಎಲೆಗಳ ನಡುವೆಯೇ ಅವಿತುಕೊಳ್ಳುವುದರಿಂದ, ಕಾಣುವುದಕ್ಕಿಂತ ಕೇಳುವುದೇ ಹೆಚ್ಚು. ಆಲ, ಅರಳಿ ಮುಂತಾದ ಹಣ್ಣುಗಳು, ಮಕರಂದ ಮತ್ತು ಕೀಟಗಳೇ ಆಹಾರ. ಇಂಪಾದ ಕೊಳಲಿನ ಸ್ವರ. ಮರದ ತುದಿ-ಕವಲುಗಳ ಮಧ್ಯೆ ಹುಲ್ಲು, ನಾರು-ಬೇರುಗಳಿಂದ ನೇಯ್ದ ಸುಂದರ ತೂಗುಯ್ಯಾಲೆ ಗೂಡು.

 

182. Eurasian Golden Oriole (Oriolus oriolus) Golden Oriole M Myna ಹೊನ್ನಕ್ಕಿ (ಮಂಜಪಕ್ಷಿ)

25 ಸೆಂಮೀ. ಗಂಡಿಗೆ ಹೊಳೆಯುವ ಚಿನ್ನದ ಹಳದಿ ದೇಹಕ್ಕೆ ಕ್ಪ ಕಣ್ಣುಪಟ್ಟಿ; ಪಿಂಕ್ ಕೊಕ್ಕು; ರೆಕ್ಕೆಗಳ ಮೇಲೆ, ಬಾಲದಲ್ಲಿ ಕ್ಪ. ಹೆಣ್ಣು ಮತ್ತು ಅವಯಸ್ಕ ಹಕ್ಕಿಗಳಿಗೆ ಪೇಲವ ಹಸಿರು ಮಿಶ್ರಿತ ದೇಹ ಮತ್ತು ಕೆಳಮೈ ಮೇಲೆ ಕಂದು ಗೀರುಗಳು. ಜೋಡಿಯಾಗಿ, ಉದುರೆಲೆ ಮತ್ತು ಒತ್ತಾದ ಕಾಡುಗಳಲ್ಲಿ, ಎಸ್ಟೇಟುಗಳಲ್ಲಿ, ಫಲ-ಷ್ಪಭರಿತ ಮರಗಳ ಅದರಲ್ಲೂ ಮಾವಿನ ಮರಗಳ ಮೇಲೆ ವಾಸ. ಪೀ.ಲೂ.ಲು.. ಕೊಳಲಿನ ಉಲಿತ. ಉತ್ತರ ಭಾರತ, ಕಾಶ್ಮೀರದಿಂದ ಚಳಿಗಾಲದ ವಲಸೆಗಾರ.