Drongos (Dicruridae)

 

ಕಾಜಾಣಗಳು (ಕಾಕಳಿಚಿಟ್ಟೆ)

 

ಕಾಡಿನ ಕಾವಲುಗಾರರೆಂದೇ ಕರೆಯಲ್ಪಡುವ, ಕ್ಪ-ಕಡುಬೂದು ಮೈಬಣ್ಣದ, ಎಸ್ಟೇಟು, ವಿರಳಗಾಡು, ಕುರುಚಲುಗಾಡುಗಳಲ್ಲಿ ವಾಸಿಸುವ ಮರ ಹಕ್ಕಿಗಳು. ದಪ್ಪನಾದ ಕೊಕ್ಕೆ-ಕೊಕ್ಕು; ಹವಳದ ಕಣ್ಣುಗಳು; ಉದ್ದವಾದ ರೆಕ್ಕೆಗಳು; ಬಲಿಷ್ಟ ಕಾಲುಗಳಲ್ಲಿ ಚೂಪಾದ ಕಾಲುಗುರು; ಉದ್ದನಾದ ಸೀಳು ಬಾಲ. ಲೀಲಾಜಾಲವಾದ, ಅಷ್ಟೇ ಶಕ್ತಿಯುತ ಹಾರಾಟ. ಸಣ್ಣ ಜೀವಿಗಳು, ಕೀಟಗಳು, ಮಕರಂದವೇ ಆಹಾರ. ನಿರ್ಭಯ ಹಕ್ಕಿಗಳು; ಇತರ ಹಕ್ಕಿಗಳು ಹಿಡಿದ ಬೇಟೆಯನ್ನು ಬೆದರಿಸಿ ದರೋಡೆ ಮಾಡುತ್ತವೆ. ತಮ್ಮ ತಂಟೆಗೆ ಬಂದ ಯಾವುದೇ ಜೀವಿಯನ್ನೂ ಹೊಡೆದೋಡಿಸುವುದರಲ್ಲಿ ನಿಷ್ಣಾತ. ಆದ್ದರಿಂದ, ಎಷ್ಟೋ ದುರ್ಬಲ ಹಕ್ಕಿಗಳು ಅದೇ ಮರದಲ್ಲಿ ತಮ್ಮ ಗೂಡನ್ನು ಕಟ್ಟಿಕೊಂಡು ರಕ್ಷಣೆ ಪಡೆಯುತ್ತವೆ. ಎತ್ತರದ ಮರದ ತುದಿಕವೆಗಳಲ್ಲಿ ಕಾಣುವಂತೆ, ಹುಲ್ಲು, ಜೇಡರ ಬಲೆ, ನಾರುಗಳಿಂದ ನೇಯ್ದ ಗೂಡು.

 

184. Black Drongo (Dicrurus macrocercus) King Crow? R Bulbul+ ಕಾಜಾಣ (ಕಾಕಳಿಚಿಟ್ಟೆ)

31 ಸೆಂಮೀ. ನೀಳ, ಸರ, ಅಚ್ಚಗ್ಪ ದೇಹ; ಉದ್ದವಾದ ಸೀಳುಬಾಲ. ಸಣ್ಣ ಗುಂಪಿನಲ್ಲಿ, ಸದಾಹಸಿರು, ಕುರುಚಲು- ವಿರಳ ಕಾಡುಗಳಲ್ಲಿ, ಕೃಷಿ ಪ್ರದೇಶ, ಎಸ್ಟೇಟುಗಳಲ್ಲಿ ವಾಸ. ಒಣರೆಂಬೆಯ ಮೇಲೋ, ತಂತಿಯ ಮೇಲೋ ಕುಳಿತು ಬೇಟೆಗೆ ಹೊಂಚುಹಾಕುತ್ತವೆ ಅಥವಾ ಗೋವುಗಳ ಮೇಲೆ ಕುಳಿತು, ಅವು ಮೇಯುತ್ತಿರುವಾಗ ಅಲುಗಾಟಕ್ಕೆ ಮೇಲೆದ್ದ ಕೀಟಗಳ ಮೇಲೆಗರಿ, ಭಕ್ಷಿಸುತ್ತವೆ. ಕರ್ಕಶ, ಬೈಗುಳದ, ಎಲೆಕ್ಟ್ರಾನಿಕ್ ಕೂಗು. ಕೀಟಭಕ್ಷಕ, ಆದ್ದರಿಂದ ರೈತನ ಮಿತ್ರ.