Storks (Ciconiidae)

 

ಕೊಕ್ಕರೆಗಳು (ಕೊಕ್ಕರೆ)

 

ದೊಡ್ಡ ಗಾತ್ರದ; ಉದ್ದವಾದ ಕೊಕ್ಕು, ಕತ್ತು, ಕಾಲು, ರೆಕ್ಕೆಯುಳ್ಳ; ಜಾಲಪಾದವಿರುವ; ವಾಸಕ್ಕೆ ಮರವನ್ನೂ, ಆಹಾರಕ್ಕೆ ನೀರನ್ನೂ ಆಶ್ರಯಿಸುವ ಹಕ್ಕಿಗಳು. ಧ್ವನಿಪೆಟ್ಟಿಗೆ ಇಲ್ಲವಾದ್ದರಿಂದ, ಕೊಕ್ಕನ್ನು ಉಜ್ಜಿಯೋ, ಬಡಿದೋ ಶಬ್ದವನ್ನು ಮಾಡುತ್ತವೆ. ಪ್ರಬಲವಾದ ಹಾರಾಟ; ಕತ್ತು-ಕಾಲುಗಳನ್ನು ನೀಡಿಕೊಂಡು ಒಂದೇ ಸಾಲಿನಲ್ಲಿ ಅಥವಾ V ವ್ಯೂಹದಲ್ಲಿ ಹಾರುತ್ತವೆ. ಮೀನು, ಕಪ್ಪೆ, ಸಣ್ಣ ಕಶೇರುಕ, ಸರೀಸೃಪ, ಕೀಟಗಳು ಮತ್ತು ಸಸ್ಯಜನ್ಯ ವಸ್ತುಗಳೇ ಇವುಗಳ ಆಹಾರ. ಮರದ ಮೇಲೆ, ಕಡ್ಡಿಗಳಿಂದ ತಯಾರಾದ ಅಟ್ಟಣೆಯ ಗೂಡು. ಹಲವು ಜಾತಿಯ ಕೊಕ್ಕರೆಗಳು ಒಂದೇ ಸ್ಥಳವನ್ನಾಶ್ರಯಿಸಿ, ಸಂಜೀವನ ನಡೆಸುತ್ತವೆ. ನಮ್ಮಲ್ಲಿಗೆ ಅಕ್ಕಪಕ್ಕದ ಪ್ರದೇಶಗಳಿಂದ ವಲಸೆ ಬರುವ ಕೊಕ್ಕರೆಗಳೂ ಇವೆ. ಹಕ್ಕಿಗಳು ತಾವು ತಂದ ಆಹಾರವನ್ನು ಜಗಿದು ಗೂಡಿನೊಳಗೆ ಕಕ್ಕುತ್ತವೆ, ಅದನ್ನು ಮರಿಹಕ್ಕಿಗಳು ಗಬಗಬನೆ ನುಂಗುತ್ತವೆ: ಇದು ಗುಟುಕು ನೀಡುವ ಪರಿ!

19. Painted Stork (Mycteria luecocephala) R/LM Vulture+/- ಬಣ್ಣದ ಕೊಕ್ಕರೆ (ರಂಗ್ ಕೊಕ್ಕರೆ)

93 ಸೆಂಮೀ. ಕಿತ್ತಳೆ-ಹಳದಿ ಕೊಕ್ಕು; ಕ್ಕರಹಿತ ಕೇಸರಿ ತಲೆ; ಬಿಳಿ ಮೈಗೆ ಗಾಢ ಹಸಿರು-ಕ್ಪ ಗೀರುಗಳು; ಎದೆಯ ಮೇಲೆ ಅಗಲವಾದ ಕರಿ ಪಟ್ಟೆ; ನೀಳವಾದ ಗುಲಾಬಿ ಬಣ್ಣದ ಕಾಲುಗಳು; ಕ್ಪ ಬಾಲ; ರೆಕ್ಕೆಗಳ ಮೇಲೆ ತಿಳಿ ಗುಲಾಬಿ ಬಣ್ಣದ ಹರಿವು. ಗುಂಪಾಗಿ, ಮೈದಾನ ಪ್ರದೇಶಗಳಲ್ಲಿ ಕಾಲುವೆ, ಕೆರೆ-ಕುಂಟೆ ಮತ್ತು ನೀರಿರುವೆಡೆ, ಮರಗಳ ಮೇಲೆ ವಾಸ. ಗಂಭೀರದ ನಡಿಗೆ. ನೀರಿನೊಳಗೆ, ತೀರಗಳಲ್ಲಿ ಮೀನು, ಕಪ್ಪೆ ಮತ್ತು ಇತರ ಜಲಚರಗಳ ಬೇಟೆ.