Woodswallows and Swallowshrikes  (Artamidae)

 

ಅಂಬರಕೀಚುಗಗಳು

 

190.  Ashy Woodswallow (Artamus fuscus) Ashy Swallow-Shrike R Bulbul+/- ಬೂದು ಅಂಬರಕೀಚುಗ (ಬೂದ್ ಮಳೆಪಕ್ಷಿ)

19 ಸೆಂಮೀ. ದುಂಡುದುಂಡಾದ, ಈ ಮರದ ಹಕ್ಕಿಗೆ, ಮೃದುವಾದ, ಸ್ಲೇಟುಬೂದು ಬಣ್ಣದ ಗರಿಗಳು; ಅಗಲವಾದ ಬಾಯಿಗೆ ತಿಳಿನೀಲಿ ಬಣ್ಣದ ಗುಬ್ಬಚ್ಚಿ ಕೊಕ್ಕು; ಕ್ಪ ಕಣ್ಣುಪಟ್ಟಿ; ಸಣ್ಣ ಕತ್ತು; ಉದ್ದ-ಚೂಪಾದ ರೆಕ್ಕೆಗಳು; ಪೇಲವ ಪೃಷ್ಠ, ಕೆಳಮೈ; ಸಣ್ಣ, ಸಧೃಢ ಕಾಲುಗಳು; ಬಿಳಿ ತುದಿಯ ಮೊಂಡುಬಾಲ. ಗುಂಪಾಗಿ, ಒಣರೆಂಬೆಯ, ತಂತಿಯ ಮೇಲೆ ಸಾಲಾಗಿ ಕುಳಿತಿರುತ್ತವೆ; ಕುಳಿತಿರುವಾಗ ತಮ್ಮ ಮೊಂಡು ಬಾಲವನ್ನು ಅಡ್ಡಡ್ಡಲಾಗಿ ಆಡಿಸುವ ಸ್ವಭಾವ. ಹಾರುವಾಗ ಪಟಪಟನೆ ಒಂದಷ್ಟು ರೆಕ್ಕೆ ಬಡಿತ, ಅಲ್ಲಿಂದ ಸೊಬಗಿನ ತೇಲಾಟ. ಹಾರುತ್ತಿರುವಾಗ ಹಿಡಿದ ಕೀಟಗಳೇ ಆಹಾರ. ಕರ್ಕಶ ಚೆಕ್.ಚೆಕ್. ಕೂಗು. ಈಚಲ ಮರಗಳಿರುವೆಡೆ, ಗರಿಗಳ ಬುಡದಲ್ಲಿ, ಒಣಹುಲ್ಲು, ನಾರು-ಬೇರುಗಳಿಂದ ಮಾಡಿದ ಗೂಡು.