Starlings and Mynas (Sturnidae)

 

ಕಬ್ಬಕ್ಕಿ ಮತ್ತು ಗೊರವಂಕಗಳು (ಕಾನಪಕ್ಷಿ)

 

ಹೆಚ್ಚಾಗಿ ಮಾನವನ ಸುತ್ತ-ಮುತ್ತಲ ವಾತಾವರಣದಲ್ಲಿ, ಗುಂಪಾಗಿ, ಮರ ಹಾಗೂ ನೆಲದ ಮೇಲೆ ವಾಸಿಸುವ ಮಧ್ಯಮ ಗಾತ್ರದ ಹಕ್ಕಿಗಳು. ಗಟ್ಟಿಮುಟ್ಟಾದ ಉದ್ದವಾದ, ಬಲಿಷ್ಟ ಕೊಕ್ಕು, ಸಧೃಢ ಕಾಲುಗಳು; ಅಗಲವಾದ-ಚೂಪಾದ ರೆಕ್ಕೆಗಳಲ್ಲಿ ಹಾರುವಾಗ ಎದ್ದುಕಾಣುವ ಅಗಲವಾದ ಬಿಳಿ ಬಾವುಟ; ಚಿಕ್ಕ, ಸಪಾಟು ಬಾಲ. ನೇರ ನಿಲುವು ಆದರೆ ಕುಂಟು ನಡೆ. ನೇರ ಶಕ್ತಿಯುತ ಹಾರಾಟ; ಕೀಟ, ಕಾಳುಗಳು, ಮಕರಂದ, ಇವೇ ಆಹಾರ. ಬೆಳೆದು ನಿಂತ ಪೈರು-ಹಣ್ಣುಗಳನ್ನು ನಾಶಮಾಡುವುದೂ ಉಂಟು. ಕೆಲವು ಹಾಡುಗಾರರನ್ನು ಬಿಟ್ಟರೆ ಉಳಿದವುಗಳದ್ದು ಕರ್ಕಶ, ವಟಗುಟ್ಟುವ ಕೂಗು. ಮರದ ಮೇಲೆ, ದೊಡ್ಡ ಸಂಖ್ಯೆಯಲ್ಲಿ ರಾತ್ರಿವೇಳೆ ವಿಶ್ರಮಿಸಿಕೊಳ್ಳುತ್ತವೆ. ಮರ, ಗೋಡೆಗಳ ರಂಧ್ರಗಳಲ್ಲಿ ಕಸ-ಕಡ್ಡಿಗಳನ್ನು ಪೇರಿಸಿ ಮಾಡಿದ ಗೂಡು.

 

191. Common Myna (Acridotheres tristis) Indian Myna R Pigeon- ಗೊರವಂಕ (ಉಣ್ಣಿಕುರುಳಿ)

23 ಸೆಂಮೀ. ಕಡುಗಂದು ದೇಹ; ಕ್ಪ ತಲೆ, ಕತ್ತು, ಎದೆ; ಹಳದಿ ಕೊಕ್ಕು-ಕಾಲುಗಳು; ಕಣ್ಣಿನ ಸುತ್ತ ನಗ್ನ ಹಳದಿ ಚರ್ಮ; ಹಾರುವಾಗ ರೆಕ್ಕೆಗಳ ಕೆಳಗೆ ಬಿಳಿ ಬಾವುಟ; ಕ್ಪ ಬಾಲಕ್ಕೆ ಬಿಳಿ ತುದಿ; ಬಿಳಿ ಕಿಬ್ಬೊಟ್ಟೆ. ಸಣ್ಣ ಗುಂಪಿನಲ್ಲಿ, ಕುರುಚಲು ಕಾಡು, ಜನವಸತಿ ಇರುವೆಡೆ ವಾಸ.  ನಿರಾತಂಕದಿಂದ ಊರೊಳಗೇ ಇದ್ದುಕೊಂಡು ಮನುಷ್ಯರು ಎಸೆದ ತಿಂಡಿ-ತಿನಿಸು, ಕ್ರಿಮಿ, ಕೀಟಗಳು, ಹಣ್ಣುಗಳು, ಹೀಗೆ ಸರ್ವಭಕ್ಷಕರು. ಕಿವಿಗೆ ಇಂಪೆನಿಸದ ಅರಚಾಟ.