192. Jungle Myna (Acridotheres fuscus) R Myna+ ಕಾಡು ಗೊರವಂಕ (ಜಡ್ಡ್ಕುರುಳಿ)

23 ಸೆಂಮೀ. ಎಲ್ಲವೂ 191ರಂತೆ, ಆದರೆ ಬೂದುಗಂದು ದೇಹ; ಕಣ್ಣಿನ ಸುತ್ತ ಹಳದಿ ಮಚ್ಚೆ ಇಲ್ಲ; ಕಿತ್ತಳೆ ಕೊಕ್ಕು; ನಿಮಿರಿ ನಿಂತ ಹಣೆಗರಿಗಳು ಪರಾಗಸ್ಪರ್ಶದಲ್ಲಿ ಸಹಾಯಕಾರಿ; ರೆಕ್ಕೆಯಲ್ಲಿ ಬಿಳಿ ಬಾವುಟ. ಜೋಡಿ ಅಥವಾ ಸಣ್ಣಗುಂಪಾಗಿ, ಕುರುಚಲು ಕಾಡು, ಎಸ್ಟೇಟು,  ಊರ ಹೊರಗಿನ ಕಾಡುಗಳಲ್ಲಿ ವಾಸ. ಮೇಯುವ ಗೋವುಗಳ ಮೇಲೆ ಸವಾರಿ ಮಾಡಿಕೊಂಡು ಕೀಟಗಳ ಬೇಟೆ, ಅಲ್ಲದೆ, ಹಣ್ಣು, ಮಕರಂದ ಆಹಾರ.  ಉಳಿದೆಲ್ಲ 191ರಂತೆ.