196. Rosy Starling (Sturnus roseus) Rosy Pastor M Myna ಗುಲಾಬಿ ಕಬ್ಬಕ್ಕಿ

23 ಸೆಂಮೀ. ಕ್ಪ ತಲೆ, ಜುಟ್ಟು, ಕತ್ತು, ಎದೆಯ ಮೇಲ್ಭಾಗ, ರೆಕ್ಕೆ ಮತ್ತು ಬಾಲ; ಉಳಿದೆಡೆ ತಿಳಿ ಗುಲಾಬಿ ಬಣ್ಣ. ಉಳಿದ ಮೈನಾಗಳೊಂದಿಗೆ, ಗುಂಪಾಗಿ ಬಯಲು, ಜನವಸತಿ ಪ್ರದೇಶಗಳಲ್ಲಿ ವಾಸ. ಸಾಮಾನ್ಯವಾಗಿ ಬೂರುಗ, ಹಾಲವಾಣ ಮರಗಳ ಹೂಗಳ ಮಕರಂದವನ್ನು ಹೀರುವುದನ್ನು ಕಾಣಬಹುದು; ಬೆಳೆದು ನಿಂತ ಪೈರಿಗೆ ಹಾನಿಕಾರಕ. ಬಹು ಗಲಾಟೆ ಸ್ವಭಾವ, ಸಮೂಹ ಉಲಿತ. ಯೂರೋಪ್, ಪಶ್ಚಿಮ-ಮಧ್ಯ ಏಷ್ಯಾದಿಂದ ಚಳಿಗಾಲದ ವಲಸೆಗಾರ.