Crows and Treepies (Corvidae)

 

ಕಾಗೆಗಳು (ಕಾಕೆ) ಮತ್ತು ಮಟಪಕ್ಷಿಗಳು (ನೂಕರೆಬಾಲ)

 

ಕ್ಪ ಬಣ್ಣದ, ದಪ್ಪ-ಗಟ್ಟಿಮುಟ್ಟಾದ ಕೊಕ್ಕಿನ, ದಷ್ಟಷ್ಟ ರೆಕ್ಕೆ ಮತ್ತು ಬಾಲದ, ದೊಡ್ಡ ಗಾತ್ರದ ಸಂಜೀವಿಗಳೇ ಕಾಗೆಗಳು. ಧೈರ್ಯ, ಸಾಹಸ ಮತ್ತು ಆಕ್ರಮಣಕಾರಿ ಸ್ವಭಾವ. ಕೆಲವೊಮ್ಮೆ ಬುದ್ಧಿವಂತಿಕೆಯನ್ನೂ ತೋರಿಸುವುದುಂಟು. ವೇಗವಾಗಿ ರೆಕ್ಕೆ ಬಡಿದುಕೊಂಡು ಹಾರುವ, ನೇರವಾದ, ಸಬಲ ಹಾರಾಟ; ಆಕಾಶದೆತ್ತರದಲ್ಲಿ ರೆಕ್ಕೆ ಬಡಿಯದೇ ತೇಲುವುದುಂಟು. ತಿನ್ನಬಹುದಾದ ಯಾವುದೇ ವಸ್ತುವೂ ಅವುಗಳ ಆಹಾರಪಟ್ಟಿಯಲ್ಲಿವೆ; ಮಿಶ್ರಾಹಾರದಲ್ಲಿ, ಅಡಿಗೆಮನೆಯ ತ್ಯಾಜ್ಯ-ಉಳಿಕೆಗಳೂ ಸೇರಿದೆ. ಮರದ ಮೇಲೆ ಮುಳ್ಳುಗಂಟಿಗಳು, ನಾರು-ಬೇರುಗಳಿಂದ ತಯಾರಾದ ಆಳವಾದ ಗೂಡು. ಇದೇ ಕುಟುಂಬಕ್ಕೆ ಸೇರಿದ ಮಟಪಕ್ಷಿಗಳು, ಕಾಡಿನಲ್ಲಿ ಮರದ ಮೇಲೆ ವಾಸಿಸುವ ಉದ್ದ ಬಾಲದ ಹಕ್ಕಿಗಳು.

 

197. House Crow (Corvus splendens) R Crow ಬೂದುಕಾಗೆ (ಪೇಟೆಕಾಕೆ)

43 ಸೆಂಮೀ. ಕ್ಪ ದೇಹಕ್ಕೆ ಬೂದು ಕುತ್ತಿಗೆ, ಎದೆ, ಹೊಟ್ಟೆ; ಕಡುಗ್ಪ ನೆತ್ತಿ, ಗಂಟಲು. ಯಾವತ್ತಿಗೂ ಮಾನವನ ನಿಕಟವರ್ತಿ. ಆಹಾರದ ವಿಷಯದಲ್ಲಿ ಯಾವುದೇ ಕಟ್ಟುಪಾಡಿಲ್ಲ. ಕಸದ ರಾಶಿಯನ್ನು ತಿಂದು ಕರಗಿಸಿ, ಪರಿಸರವನ್ನು ಚೊಕ್ಕಟವಾಗಿಡುವ ಕಾಯಕ. ಮರಗಳ ಮೇಲೆ ಗುಂಪಾಗಿ ತಂಗುವಿಕೆ. ಸುಪರಿಚಿತ, ಕರ್ಕಶ ಕಾ..ಕಾ.. ಕೂಗು. ಕೋಗಿಲೆಯ ಮೊಟ್ಟೆ-ಮರಿಗಳಿಗೆ ಆಶ್ರಯದಾತ.