Cuckoo-Shrikes, Flycatcher-Shrikes, Woodshrikes

and Minivets (Campephagidae)

 

ಕೀಚುಗಗಳು ಮತ್ತು ಚಿತ್ರಪಕ್ಷಿಗಳು (ತಿತ್ತ್ಕಂಡಪಕ್ಷಿ)

 

ಜೀವನದ ಹೆಚ್ಚು ಸಮಯ ಮರಗಳಲ್ಲಿ, ಎಲೆಗಳ ನಡುವೆ ವಾಸಿಸುವ ಹಕ್ಕಿಗಳು. ಗಟ್ಟಿಮುಟ್ಟಾದ, ತುಸು ಕೊಕ್ಕೆಯಂತೆ ಬಾಗಿದ ಕೊಕ್ಕು; ಕಣ್ಣಿಗೆ ಕ್ಪಪಟ್ಟಿ; ಸಣ್ಣ ಕಾಲುಗಳು; ಉದ್ದವಾದ ಪಟ್ಟೆ ಬಾಲ. ಗಂಡು-ಹೆಣ್ಣು ವಿಭಿನ್ನ. ಕೀಟಗಳು, ಮರಿಹುಳಗಳು, ಮಕರಂದ, ಹಣ್ಣುಗಳೇ ಆಹಾರ. ಮರದ ಕೊಂಬೆಗಳ ಕವಲುಗಳಲ್ಲಿ, ಕಡ್ಡಿ, ಬೇರು, ಜೇಡರಬಲೆಯಿಂದ ತಯಾರಾದ ಬಟ್ಟಲಿನಂತಹ ಗೂಡು. ಇನ್ನು ಇದೇ ಕುಟುಂಬಕ್ಕೆ ಸೇರಿದ ಚಿತ್ರಪಕ್ಷಿಗಳು, ಎತ್ತರದ ಹೂವರಳಿದ ವೃಕ್ಷಗಳ ಮೇಲೆ ಗುಂಪಾಗಿ, ಸಂಭ್ರಮದಿಂದ ಹಾರಾಡುತ್ತಾ ವನಕ್ಕೆ ಕಳೆಗಟ್ಟುವ ಉಜ್ವಲ ಬಣ್ಣದ ಹಕ್ಕಿಗಳು.

 

201.  Large Cuckoo-Shrike (Coracina macei) R Pigeon- ಕೋಗಿಲೆಕೀಚುಗ

28 ಸೆಂಮೀ. ದಷ್ಟಷ್ಟವಾದ ಬೂದು ಹಕ್ಕಿ; ಕಣ್ಣಿಗೆ ಪಟ್ಟಿ; ರೆಕ್ಕೆ-ಬಾಲದಲ್ಲಿ ಕ್ಪ; ಬೂದು ಎದೆ; ಬಿಳಿ ಕೆಳಮೈ. ವಿರಳಕಾಡುಗಳಲ್ಲಿ, ಎಸ್ಟೇಟುಗಳಲ್ಲಿ ಎಲೆಗಳ ಮಧ್ಯೆ ಜೋಡಿಯಾಗಿ ಕಾಣಬಹುದು. ಎರಡು ಸ್ವರದ ಟಿ.ಟೀ.. ಕೂಗು.