Iora, Chloropsis and Fairy Bluebird (Irenidae)

 

ಮಧುರಕಂಠ (ಉಗ್ಗೆಏತ), ಎಲೆಹಕ್ಕಿ (ತೊಪ್ಪ್ಕುಡ್ಕ) ಮತ್ತು ನೀಲಿಸಿಳ್ಳಾರಗಳು (ಬಳ್ಳಿಕೂರ)

 

ಉಜ್ವಲ ಬಣ್ಣದ, ಮರದ ಮೇಲೆ ವಾಸಿಸುವ ಸಣ್ಣ ಅಥವಾ ಮಧ್ಯಮ ಗಾತ್ರದ ಹಕ್ಕಿಗಳು. ಸಣ್ಣ ಅಥವಾ ಸರವಾದ, ಬಾಗಿದ ಕೊಕ್ಕು; ಸದೃಢ ದುಂಡು ರೆಕ್ಕೆಗಳು; ಸಣ್ಣ ಕಾಲುಗಳು; ಸಪಾಟಾದ ಬಾಲ. ಗಂಡು-ಹೆಣ್ಣು ನೋಡಲು ವಿಭಿನ್ನ. ಹಣ್ಣು, ಮಕರಂದ, ಕೀಟ ಮತ್ತು ಜೇಡಗಳೇ ಆಹಾರ. ಕುಟುಂಬದ ಎಲ್ಲ ಹಕ್ಕಿಗಳೂ ಉತ್ತಮ ಹಾಡುಗಾರರು; ನಿಸ್ಸೀಮ ಅಣಕುಗಾರರೂ ಕೂಡ. ಮರದ ಮೇಲೆ, ನಾರು-ಬೇರು ಜೇಡರ ಬಲೆಗಳಿಂದ ತಯಾರಾದ ಬಟ್ಟಲಿನ ಆಕಾರದ ಗೂಡು.

 

208. Common Iora (Aegithina tiphia) Iora R Sparrow ಮಧುರಕಂಠ (ಉಗ್ಗೆಏತ)

14 ಸೆಂಮೀ. ಅಚ್ಚ ಹಳದಿ ಚೆಂಡು. ಕ್ಪ ಮೇಲ್ಭಾಗ; ಶುಭ್ರ ಹಳದಿ ಕೆನ್ನೆ, ಪೃಷ್ಠ, ಕೆಳಮೈ; ರೆಕ್ಕೆಯ ಮೇಲೆ ಎರಡು ಬಿಳಿ ಪಟ್ಟಿ; ಕ್ಪ ಬಾಲ. ಹೆಣ್ಣಿನದ್ದು ಹಳದಿ-ಹಸಿರು ದೇಹ; ರೆಕ್ಕೆಯಲ್ಲಿ ಪೇಲವ ಹಸಿರುಗಂದು. ಜೋಡಿಯಾಗಿ ಉದುರೆಲೆ ಕಾಡು, ಎಸ್ಟೇಟು, ಹೂದೋಟಗಳಲ್ಲಿ, ತೋಗಳಲ್ಲಿ, ಹೂ-ಹಣ್ಣುಗಳಿರುವ ಮರಗಳ ಮೇಲೆ ಕುಪ್ಪಳಿಸುತ್ತ ಕೀಟಗಳ ಬೇಟೆಯಲ್ಲಿ ಓಡಾಡುತ್ತವೆ. ಇಂಪಾದ ಶ್ರೀಮಂತ ಶೋ.ಬೀ..ಗೀ.. ಸಿಳ್ಳು; ಅಲ್ಲದೆ ಸಂಗೀತದ ವಿವಿಧ ಸ್ವರಗಳ ಕೂಗು.