Bulbuls (Pycnonotidae)

 

ಪಿಕಳಾರಗಳು (ಕೊಟ್ಟ್0ಬುಡ್ಚ)

 

ಸಂಗೀತದ ಮನೆತನಕ್ಕೆ ಸೇರಿದ, ಅದರಲ್ಲೂ ಸಮೂಹಗಾನಕ್ಕೆ ಹೆಸರಾದ, ಹಕ್ಕಿಗಳು. ಕಾಡಿನಲ್ಲಾಗಲೀ, ಹೂದೋಟಗಳಲ್ಲಾಗಲೀ ಹಾಡುತ್ತಾ, ಹಾರಾಡುತ್ತಾ ಕಣ್ಮನಗಳನ್ನು ತಣಿಸುತ್ತವೆ; ಮರದಿಂದ ಮರಕ್ಕೆ ಕುತೂಹಲದಿಂದ, ಲವಲವಿಕೆಯಿಂದ ಕುಪ್ಪಳಿಸುತ್ತಾ ಇಡೀ ವಾತಾವರಣವನ್ನೇ ಜೀವಂತಗೊಳಿಸುತ್ತವೆ. ಎಲ್ಲಾ ಜಾತಿಯವೂ ಸರಿಸುಮಾರು ಒಂದೇ ಗಾತ್ರ. ಮಾಸಲು ಬಣ್ಣದ ದೇಹ; ಸಣ್ಣ-ತುಸು ಬಾಗಿದ ಕೊಕ್ಕು; ಸಣ್ಣ-ದುಂಡಾದ ರೆಕ್ಕೆಗಳು; ಸಣ್ಣ ದುರ್ಬಲ ಕಾಲುಗಳು; ತುಸು ಉದ್ದವಾದ ಬಾಲ. ಬುಲ್ಬುಲ್ಗಳು ಹಣ್ಣು, ಮಕರಂದ ಹಾಗೂ ಕೀಟಪ್ರಿಯರು. ಗಿಡ-ಗಂಟಿಗಳ ಕವಲುಗಳಲ್ಲಿ ಬಟ್ಟಲಿನಂತಹ ಟ್ಟ ಗೂಡು ಕಂಡರೆ, ಹೆಚ್ಚಿನಪಾಲು ಅದು ಪಿಕರಾಳದ್ದೇ ಸರಿ.

 

212. Red-whiskered Bulbul (Pycnonotus jocosus) R Bulbul ಕೆಮ್ಮೀಸೆ ಪಿಕಳಾರ (ಚೋಂದದವಡೆ ಕೊಟ್ಟ್0ಬುಡ್ಚ)

20 ಸೆಂಮೀ. ಸಾಮಾನ್ಯವಾಗಿ ಕಂಡುಬರುವ ಪಿಕಳಾರ; ಕ್ಪತಲೆಯ ಮೇಲೆ ಮುಂದಕ್ಕೆ ಬಾಗಿರುವ ಪಿಳ್ಳುಜುಟ್ಟು; ಕ್ಪ ಹಿಂಗತ್ತು, ಕೆನ್ನೆ, ಎದೆಯ ಕಾಲರ್; ಕೆನ್ನೆಯ ಮೇಲೆ ಬಿಳಿ-ಕೆಂ ಮತ್ತು ಕೆಳ ಹೊಟ್ಟೆಯ ಮೇಲೆ ಕೆಂ ಮಚ್ಚೆ; ಕಂದು ಬೆನ್ನು ಮತ್ತು ಬಿಳಿ ಕೆಳಮೈ. ಗುಂಪಾಗಿ, ಕುರುಚಲು, ವಿರಳ ಕಾಡು, ಜನವಸತಿ ಪ್ರದೇಶಗಳಲ್ಲಿ ವಾಸ; ಮನೆಗಳ ಸುತ್ತ-ಮುತ್ತಲ ಹೂದೋಟಗಳಲ್ಲಿ ಅಡ್ಡಾಡುತ್ತಾ ಚೇತೋಹಾರಿ ಸನ್ನಿವೇಶವನ್ನು ಸೃಷ್ಟಿಸುತ್ತವೆ. ಕಿವಿಗಿಂಪಾದ ಹಲವು ಸ್ವರಗಳ ಚುರು.ಚುರುಳಿ.. ಕೂಗು.