214. White-browed Bulbul (Pycnonotus luteolus) R Bulbul ಬಿಳಿಹುಬ್ಬಿನ ಪಿಕಳಾರ (ಬೊಳ್ತಬ್ಬ್ರ ಕೊಟ್ಟ್0ಬುಡ್ಚ)

20 ಸೆಂಮೀ. ತಿಳಿಗಂದು ಮಿಶ್ರಿತ ಎಲೆಹಸಿರು ಮೇಲ್ಮೈ; ಕೆಂಗಣ್ಣು; ಬಿಳಿ ಹುಬ್ಬು; ತಿಳಿ ಕೆಳಮೈ. ಉದುರೆಲೆ, ಕುರುಚಲು, ವಿರಳಗಾಡು, ಹಳ್ಳಿಗಳ ಸುತ್ತಮುತ್ತ, ಹೂ-ಹಣ್ಣಿನ ತೋಟಗಳಲ್ಲಿ ವಾಸ. ಮಳೆ ಬಿದ್ದೊಡನೆ ಏಳುವ ರೆಕ್ಕೆ-ಗೆದ್ದಲುಗಳೆಂದರೆ ಬಲು ಇಷ್ಟ. ಎಲೆಗಳ ನಡುವೆ ಅಡಗಿಕೊಂಡಿದ್ದರೂ ಇಂಪಾದ ಸಿಳ್ಳೆಯಿಂದ ಪತ್ತೆಹಚ್ಚಬಹುದು. ಉಳಿದೆಲ್ಲ 212ರಂತೆ.