216. Yellow-browed Bulbul (Iole indica) R Bulbul ಹಳದಿಹುಬ್ಬಿನ ಪಿಕಳಾರ (ಮಂಜಬ್ಬ್ರ  ಕೊಟ್ಟ್0ಬುಡ್ಚ)

20 ಸೆಂಮೀ. ಎಲ್ಲವೂ 214ರಂತೆ, ಮಾಸಲು ಹಸಿರು ಮೇಲ್ಮೈ, ಆದರೆ ಅಚ್ಚ ಹಳದಿ ಹಣೆ, ಕೆನ್ನೆ, ಹುಬ್ಬು ಮತ್ತು ಕೆಳಭಾಗ; ಬಾಲದಲ್ಲಿ ಕಂದು. ಸದಾಹಸಿರು, ತೇವೆ-ಉದುರೆಲೆ, ಶೋಲಾ ಅರಣ್ಯ ಮತ್ತು ಕಾಫಿ-ಏಲಕ್ಕಿ ಎಸ್ಟೇಟುಗಳಲ್ಲಿ ವಾಸ. 2 ಸ್ವರದ ಸಿಳ್ಳೆ, ಗುರುತು ಹಿಡಿಯಲು ಸಹಕಾರಿ. ಸುವರ್ಣಪಕ್ಷಿಯಂತೆ ಅಡ್ಡಕೊಂಬೆಯ ಕವಲಿಗೆ ಉಯ್ಯಾಲೆಯಂತೆ ನೇತುಹಾಕಿದ ಆಳವಾದ ಬಟ್ಟಲಿನಂತಹ ಗೂಡು. ಉಳಿದೆಲ್ಲ 214ರಂತೆ.