Babblers, Laughingthrushes  (Muscicapidae: Timaliinae)

 

ಹರಟೆಮಲ್ಲ (ಗೆಜ್ಜಳಬಾಯ) ಮತ್ತು ನಗೆಮಲ್ಲಗಳು

 

ಹೆಸರಿಗೆ ಹರಟೆಮಲ್ಲರಾದರೂ, ಬಹು ಸಂಕೋಚ ಸ್ವಭಾವದ, ಹೆಚ್ಚಾಗಿ ಬೇಲಿ, ದಟ್ಟದೆ, ಕುರುಚಲು, ಬಿದಿರು ಮತ್ತು ಗಿಡಗಂಟಿಗಳಲ್ಲಿ ಗುಂಪಾಗಿ ವಾಸಿಸುವ ಸಣ್ಣ ಅಥವಾ ಮಧ್ಯಮ ಗಾತ್ರದ ಹಕ್ಕಿಗಳು. ಸಡಿಲ ಗರಿಗಳು; ಗಟ್ಟಿಮುಟ್ಟಾದ ಕೊಕ್ಕು, ಕಾಲು ಮತ್ತು ಪಾದಗಳು; ಬಹುದೂರ ಹಾರಲಾಗದ, ಸಣ್ಣ-ಗುಂಡಾದ ರೆಕ್ಕೆಗಳು. ಸಡಿಲವಾಗಿ ಅಂಟಿಸಿರುವಂತೆ ಕಾಣುವ ಬಾಲ. ಸಾಧಾರಣವಾಗಿ ಆರರಿಂದ ಏಳು ಪಕ್ಷಿಗಳು ಒಟ್ಟಾಗಿ ವಾಸಮಾಡುತ್ತವೆ. ನೆಲದ ಮೇಲೆ, ದೆಗಳಲ್ಲಿ ಕುಪ್ಪಳಿಸಿಕೊಂಡು, ಬಾಲವನ್ನು ಅಡ್ಡಡ್ಡಲಾಗಿ ಆಡಿಸಿಕೊಂಡು ನಡೆಯುವ ಮತ್ತು ಹಾರುವಾಗ ಒಂದರ ಹಿಂದೆ ಒಂದು, ಒಟ್ಟಾಗಿ ಹಾರುವ ಸ್ವಭಾವ. ಕೀಟ, ಸಣ್ಣ ಜೀವಿಗಳು, ಹಣ್ಣು, ಮಕರಂದವೇ ಆಹಾರ. ಗುಂಪಾಗಿ, ಸಣ್ಣ ಸ್ವರದಲ್ಲಿ ಅರಚಾಡುವುವು; ಕೆಲವಕ್ಕೆ ಸುಶ್ರಾವ್ಯ ಕಂಠ. ದೆಗಳಲ್ಲಿ, ಒತ್ತಾದ ಮರಗಳಲ್ಲಿ, ಬಟ್ಟಲು ಆಕಾರದ ಗೂಡು. ಕೋಗಿಲೆ ಕುಟುಂಬದ ಹಕ್ಕಿಗಳ ಮೊಟ್ಟೆ-ಮರಿಗಳಿಗೆ ಆಶ್ರಯ ಮತ್ತು ಷಣೆ.

 

219. Common Babbler (Turdoides caudatus) R Bulbul+ ಹರಟೆಮಲ್ಲ (ಗೆಜ್ಜಳಬಾಯ)

23 ಸೆಂಮೀ. ಮಣ್ಣುಗಂದು ದೇಹದ ಮೇಲೆ ತಿಳಿ ಗೀರುಗಳು; ಉದ್ದ ಪಟ್ಟೆಬಾಲ; ಮಾಸಲು ಬಿಳಿ ಗಂಟಲು. ಸಣ್ಣ ಗುಂಪಿನಲ್ಲಿ, ಒಣ ಕುರುಚಲು, ದೆಗಾಡುಗಳಲ್ಲಿ ಕಾಣಬಹುದು. ವಿಚಲಿತಗೊಂಡಾಗ, ರೆಕ್ಕೆ ಬಾಲ ಬಡಿದುಕೊಂಡು ಸಾಮೂಹಿಕವಾಗಿ ವಿಚ್.ವಿಚ್.ವಿಚ್.ವೀ.. ಕೂಗು ಮತ್ತು ಸಹಚರ್ಯವಿರಿಸಿಕೊಳ್ಳಲು ಮೊಟಕಾದ ಕಂಪನ ಧ್ವನಿಯ ಸರಣಿ ಸಿಳ್ಳು.