222.  Jungle Babbler (Turdoides striatus) R Myna- ಅಡವಿ ಹರಟೆಮಲ್ಲ (ಕಾಡ್ ಗೆಜ್ಜಳಬಾಯ)

25 ಸೆಂಮೀ. ಸಪ್ತ ಕನ್ಯೆಯರಂತೆ, ಒಟ್ಟಾಗಿ ವಾಸಿಸುವ, ಮಾಸಲು ನೆಲಗಂದು ಬಣ್ಣದ ಅನಾಕರ್ಷಕ ಹಕ್ಕಿಗಳು. ಸಡಿಲವಾದ ಕೆಂಗಂದು ಬಾಲ; ಬೆನ್ನಲ್ಲಿ ಗೀರುಗಳು. ಸದಾಹಸಿರು, ಎಸ್ಟೇಟುಗಳಲ್ಲಿ ದೆಗಳ ಮಧ್ಯೆ, ನೆಲದ ಮೇಲೆ, ಕಸಕಡ್ಡಿಗಳ ನಡುವೆ, ಜೇಡ, ಜಿರಳೆ, ಮಿಡತೆ, ಮರಿಹುಳ, ಕೀಟ, ಕೆಳಬಿದ್ದ ಹಣ್ಣುಗಳನ್ನು ಹೆಕ್ಕುತ್ತವೆ. ಒಟ್ಟಾಗಿ ಸೌಹಾರ್ದಯುತ ಚಿಚಿಚಿಚಿ… ಕೋರಸ್. ಹೆತ್ತವರೊಂದಿಗೆ ಉಳಿದ ಹಕ್ಕಿಗಳೂ ಮನೆಕೆಲಸಗಳಲ್ಲಿ ಭಾಗಿಗಳಾಗುತ್ತವೆ.