224. Indian Scimitar-Babbler (Pomatorhinus horsfieldii) Slaty-headed Scimitar Babbler R Bulbul+ ಕುಡುಗೊಕ್ಕು ಹರಟೆಮಲ್ಲ (ಪಿಕಾಸಿ ಗೆಜ್ಜಳಬಾಯ)

22 ಸೆಂಮೀ. ಕಡುಗಂದು ಮೇಲ್ಮೈ; ಬಿಳಿ ಹುಬ್ಬು, ಗಲ್ಲ, ಎದೆ; ಎದ್ದು ಕಾಣುವ ಕುಡುಗೋಲಿನಂತೆ ಬಾಗಿದ, ಹಳದಿ ಕೊಕ್ಕು. ಬಹು ನಾಚಿಗೆ ಸ್ವಭಾವ. ಜೋಡಿಯಾಗಿ, ಒತ್ತಾದ ದೆಗಳಿರುವೆಡೆ, ನೆಲದ ಮೇಲೆ, ಕ್ರಿಮಿ-ಕೀಟಗಳನ್ನರಸುತ್ತ, ಬಿದಿರು ಮೆಳೆಗಳಲ್ಲಿ, ಒತ್ತಾದ ಹಾವಸೆಯಿಂದಾವೃತವಾದ ಮರಗಳಲ್ಲಿ, ಓಡಾಡುತ್ತವೆ. ಗಂಡುಹಕ್ಕಿಯ 4-ಸ್ವರದ, ಕೊಳಲಿನ, ಹು.ಹು.ಹು.ಹು. ಕರೆಗೆ, ಹೆಣ್ಣಿನ ಟ್ರೀನ್.ಟ್ರಿ! ಮರುತ್ತರ.