227. White-headed Babbler (Turdoides affinis) R Bulbul+ ಬಿಳಿತಲೆಯ ಹರಟೆಮಲ್ಲ (ಬೊಳ್ತಮಂಡೆ ಗೆಜ್ಜಳಬಾಯ)

23 ಸೆಂಮೀ. ಮಾಸಲುಗಂದು ಮೇಲ್ಮೈ; ಪೇಲವ ಬಿಳಿ ನೆತ್ತಿ, ಹಿಂಗತ್ತು; ಹುರಪೆಯಂತೆ ಕಾಣುವ ಗಲ್ಲ, ಎದೆ; ಮಾಸಲು ಹಳದಿ ಕೆಳಮೈ. ಗುಂಪಾಗಿ ಉದುರೆಲೆ, ಕುರುಚಲು ಕಾಡು ಮತ್ತು ಒತ್ತಾದ ದೆಗಾಡುಗಳಲ್ಲಿ ಕುಪ್ಪಳಿಸುತ್ತ ಹಾರುವ ಸ್ವಭಾವ. ಟಿರ್ರ್ರ್ರ್.ಚ್.ರ್ರ್ರ್.. ಸಂಗೀತದ ಕಂಪನ ದನಿ. ಗುಂಪಾಗಿ, ಕಡ್ಡಿ-ಬೇರುಗಳಿಂದ ತಯಾರಾದ ಬಟ್ಟಲಿನಂತಹ ಗೂಡು.