Ibises and Spoonbills (Threskiornithidae)

 

ಕೆಂಬರಲುಗಳು ಮತ್ತು ಚಮಚದ ಕೊಕ್ಕುಗಳು (ಬಾಳ್ಕೊಕ್ಕ)

 

ಕ್ಕಗಳಿಲ್ಲದ, ನೀಳ, ಜಾಲಪಾದವಿರುವ ಕಾಲುಗಳು, ಉದ್ದನಾದ ರೆಕ್ಕೆ ಹೊಂದಿದ್ದು, ಉಳಿದ ಜಲಪಕ್ಷಿಗಳೊಂದಿಗೆ ಸಮೂಹ ಜೀವನ ನಡೆಸುವ ನೀರು ಪಕ್ಷಿಗಳು. ಇದರಲ್ಲಿ ಕೆಂಬರಲುಗಳು ಉದ್ದನಾಗಿ, ಕೆಳಕ್ಕೆ ಬಾಗಿದ ಕೊಕ್ಕನ್ನು ಹೊಂದಿದ್ದರೆ, ಸ್ಪೂನ್ಬಿಲ್ಗಳ ಕೊಕ್ಕು ನೀಳ ಸಟ್ಟುಗದ ರೀತಿ. ನೀಳಕತ್ತನ್ನು ಚಾಚಿಕೊಂಡು ಹಾರಾಟ. ಕಪ್ಪೆ, ಮೀನು, ಏಡಿ, ಮೃದ್ವಂಗಿ, ಕೀಟ, ಸಸ್ಯಜನ್ಯ ವಸ್ತುಗಳು ಇವುಗಳ ಆಹಾರ. ಶಕ್ತಿಯುತ ರೆಕ್ಕೆಬಡಿತಗಳೊಂದಿಗೆ, ಒಂದರ ಹಿಂದೊಂದು ಆಕಾಶದಲ್ಲಿ V ಆಕಾರದಲ್ಲಿ ಸಮರ್ಥ ಹಾರಾಟ. ಮರಗಳ ಮೇಲೆ ಕಡ್ಡಿಗಳಿಂದ ತಯಾರಾದ, ಹುಲ್ಲು-ಗರಿಗಳನ್ನು ಹಾಸಿರುವ ಅಟ್ಟಣೆ ಗೂಡು.

 

23. Oriental White Ibis (Threskiornis melanocephalus) White Ibis R Hen+ ಬಿಳಿ ಕೆಂಬರಲು (ಬೊಳ್ತ ಬಾಳ್ಕೊಕ್ಕ)

75 ಸೆಂಮೀ. ಬಿಳಿ ಮೈ; ಅಚ್ಚ ಕ್ಪ ನಗ್ನ ತಲೆ, ಕತ್ತು; ಕೆಳಕ್ಕೆ ಬಾಗಿದ ನೀಳ ಕ್ಪ ಕೊಕ್ಕು; ಪಕ್ಕೆ ಮತ್ತು ರೆಕ್ಕೆಯಡಿಗಳಲ್ಲಿ ಹಾರುವಾಗ ಕಾಣುವ ರಕ್ತಗೆಂ ಬಣ್ಣದ ಮಚ್ಚೆಗಳು; ಕ್ಪ ಕಾಲುಗಳು. ಜಲಪ್ರದೇಶ, ಕೆರೆದಂಡೆ, ಕೃಷಿ ಮತ್ತು ಜೌಗುಪ್ರದೇಶಗಳಲ್ಲಿ ವಾಸ. ಇಕ್ಕಳದ ರೀತಿ ಕೊಕ್ಕನ್ನು ನೀರಿನೊಳಗೆ ಆಡಿಸುತ್ತ, ಜಲಚರಗಳನ್ನೂ, ಸಸ್ಯಜನ್ಯಗಳನ್ನೂ ತಿನ್ನುವ ಸ್ವಭಾವ. ನೈಜ ಧ್ವನಿಯಿಲ್ಲವಾದ್ದರಿಂದ ಬರೇ ಗುರುಗುಟ್ಟುವಿಕೆಯ ಶಬ್ದ.