Flycatchers (Muscicapidae: Muscicapinae)

 

ನೊಣಹಿಡುಕಗಳು (ಒಲ್ಂಜಿಚುಂಡೆ)

 

ಹೆಚ್ಚಾಗಿ, ಕೀಟ, ಜೇಡಗಳನ್ನೇ ಹಿಡಿದು ತಿನ್ನುವ, ಮರಗಳಲ್ಲಿ ವಾಸಿಸುವ, ಚುರುಕಾದ ಟ್ಟ ಹಕ್ಕಿಗಳು. ಸಣ್ಣ ಕೊಕ್ಕು; ಅಗಲವಾದ, ಸಣ್ಣ ಮತ್ತು ಉರುಟಾದ ರೆಕ್ಕೆಗಳು; ಸಣ್ಣ ಬಾಲ ಮತ್ತು ಕಾಲುಗಳು. ಸುಮ್ಮನೆ ಕುಳಿತಿರುವಾಗ ರೆಕ್ಕೆ-ಬಾಲವನ್ನು ಆಗಾಗ ಆಡಿಸುತ್ತವೆ; ಕುಳಿತಲ್ಲಿಂದ ಒಮ್ಮೆಲೇ ಹಾರಿ ಕೀಟಗಳನ್ನು ಹಿಡಿಯುತ್ತವೆ; ಹೀಗೆ ಹಿಡಿದ ಕೀಟ, ಜೇಡ ಮುಂತಾದುವೇ ಆಹಾರ. ಹೆಚ್ಚಿನವಕ್ಕೆ ಮೃದುವಾದ ಹೃಸ್ವಸ್ವರದ ಕೂಗು, ಕೆಲವು ಜಾತಿಯವು ಸಣ್ಣ ಕಂಠದಲ್ಲಿ ಹಾಡುತ್ತವೆ ಕೂಡ. ಮರ, ದೆ ಅಥವಾ ಸಣ್ಣ ರಂಧ್ರಗಳಲ್ಲಿ, ಬೇರು-ನಾರು, ಹುಲ್ಲಿನಿಂದ ತಯಾರಾದ, ಅಚ್ಚುಕಟ್ಟಾದ ಗೂಡು.

 

233. Asian Brown Flycatcher (Muscicapa dauurica) Brown Flycatcher R Sparrow+/- ಕಂದು ನೊಣಹಿಡುಕ (ಚೋಂದ ಒಲ್ಂಜಿಚುಂಡೆ)

14 ಸೆಂಮೀ. ಬೂದುಗಂದು ಬಣ್ಣದ ದೇಹಕ್ಕೆ ಬಿಳಿ ಗಲ್ಲ; ಮಾಸಲು ಕೆಳಮೈ; ಕಣ್ಣಿನ ಸುತ್ತ ಬಿಳಿ ಉಂಗುರ; ಕ್ಪ ಕಾಲುಗಳು; ಹಳದಿ ಕೆಳಕೊಕ್ಕು. ಎಸ್ಟೇಟುಗಳಲ್ಲಿ, ಹಳ್ಳಿಗಾಡುಗಳಲ್ಲಿ ಕಾಣಬಹುದು. ನೀರಿರುವೆಡೆ, ಒಣರೆಂಬೆಯಲ್ಲಿ ಕುಳಿತು ಬೇಟೆಗೆ ಹೊಂಚು; ಗಾಳಿಯಲ್ಲಿ ಹಾರಿ ಕೀಟಗಳನ್ನು ಹಿಡಿಯುತ್ತವೆ. ಚಿಕ್.ಚಿಕ್.ರ್ರ್.ರ್ರ್.. ಮೆದು ಉಲಿತ.