239. Verditer Flycatcher (Eumyias thalassina) M Sparrow+/- ನೀಲಿ ನೊಣಹಿಡುಕ (ನೀಲಿ ಒಲ್ಂಜಿಚುಂಡೆ)

15 ಸೆಂಮೀ. ಗಂಡಿಗೆ ತಿಳಿನೀಲಿ-ಹಸಿರು ದೇಹ; ರೆಕ್ಕೆಯ ಮೇಲೆ ತುಸು ಗಾಢ; ಕಣ್ಣಿನ ಮುಂದೆ ಕ್ಪ. ಹೆಣ್ಣಿಗೆ ಬೂದು ಛಾಯೆ. ಒಂಟಿಯಾಗಿ, ಸೊಂಪಾದ ಕಾಡಿನಲ್ಲಿ, ಅವಿರತವಾಗಿ ಓಡಾಡುತ್ತ, ಮರದ ತುದಿಯಲ್ಲಿ ಕುಳಿತು, ಗಾಳಿಯಲ್ಲಿ ಕೀಟಗಳನ್ನು ಹಿಡಿಯುವುದನ್ನು ಕಾಣಬಹುದು. ಹಿಮಾಲಯ-ಅರುಣಾಚಲ ಪ್ರದೇಶಗಳಿಂದ ಚಳಿಗಾಲದ ವಲಸೆಗಾರ.