243. Grey-headed Flycatcher (Culicicapa ceylonensis)  R Sparrow- ಬೂದುತಲೆ ನೊಣಹಿಡುಕ (ಬೂದ್ಮಂಡೆರ ಒಲ್ಂಜಿಚುಂಡೆ)

9 ಸೆಂಮೀ. ಬೂದು ತಲೆ, ಕತ್ತು, ಎದೆ; ತಿಳಿ ಹಸಿರು ಹಳದಿ ಮೇಲ್ಮೈ; ಕಂದು ರೆಕ್ಕೆ, ಬಾಲದಲ್ಲಿ ಹಳದಿ; ಅಚ್ಚ ಹಳದಿ ಪೃಷ್ಠ, ಕೆಳಮೈ. ಒಂಟಿಯಾಗಿ, ಉಳಿದ ಕೀಟಭಕ್ಷಕಗಳೊಂದಿಗೆ, ಕಾಡುಗಳಲ್ಲಿ ಬೇಟೆಯರಸುತ್ತದೆ. 5 ಸ್ವರಗಳ ಚಿಕ್.ವಿಚೀ..ವಿಚೀ? ಪ್ರಶ್ನಾರ್ಥಕ ಸಿಳ್ಳೆ. ಮರದ ಕಾಂಡಕ್ಕೆ ಅಂಟಿಸಿದ, ನಾರು-ಪಾಚಿಗಳಿಂದ ತಯಾರಾದ ಗೂಡು.