Fantail-Flycatchers  (Muscicapidae: Rhipidurinae)

 

ಬೀಸಣಿಗೆನೊಣಹಿಡುಕಗಳು (ಒಕ್ಕೆಚೆರ್ಪ)

 

ಮೋಹಕ, ಬೀಸಣಿಗೆಯಂತಹ ಬಾಲವಿರುವ, ಸಣ್ಣ ಗಾತ್ರದ ಹಕ್ಕಿಗಳು. ಗಂಡು-ಹೆಣ್ಣು ನೋಡಲು ಒಂದೇ ರೀತಿಯಿರುತ್ತವೆ. ಕೀಟಾಹಾರಿಗಳು; ಹಾರುತ್ತಿರುವ ಹುಳಗಳನ್ನು ಹಿಡಿಯಲು ಗಾಳಿಯಲ್ಲಿ ಸರ್ಕಸ್ ಮಾಡುತ್ತವೆ. ಆಗಾಗ ಬಾಲವನ್ನು ಬೀಸಣಿಗೆಯಂತೆ ಹರಡುತ್ತವೆ. ದೆಗಳೊಳಗೆ, ಕೊಂಬೆಗಳ ಕವಲಿನಲ್ಲಿ, ನಾರು-ಬೇರುಗಳನ್ನು ಜೇಡದ ಬಲೆಯಲ್ಲಿ ಅಂಟಿಸಿದ, ಅಚ್ಚುಕಟ್ಟಾದ ಗೂಡು.

 

244.  White-spotted Fantail-Flycatcher (Rhipidura albicollis albogularis) R Bulbul- ಬಿಳಿಚುಕ್ಕೆಯ ಬೀಸಣಿಗೆನೊಣಹಿಡುಕ (ಬೊಟ್ಟ್ ಒಕ್ಕೆಚೆರ್ಪ)

17 ಸೆಂಮೀ. ಕ್ಪಗಂದು ಮೇಲ್ಮೈ; ಬಿಳಿ ಹುಬ್ಬು, ಗಲ್ಲ; ಮಾಸಲು ಕೆಳಮೈ; ಬೂದು ಎದೆಯ ಮೇಲೆ ಬಿಳಿ ಮಚ್ಚೆಗಳು; ಬಾಲದ ಗರಿಗಳ ತುದಿಯಲ್ಲಿ ಬಿಳಿ. ಅತ್ತಿತ್ತ ತಿರುಗುವಾಗ, ಆಗಾಗ ಬಾಲವನ್ನು ಬೀಸಣಿಗೆಯಂತೆ ಅಗಲಿಸುವುದು; ಹಾರುವ ಕೀಟಗಳ ಭಕ್ಷಕ. ಚ್ಕ್.ಚ್ಕ್. ಕೂಗು.