Monarch-Flycatchers and Paradise-Flycatchers

(Muscicapidae: Monarchinae)

 

ರಾಜಹಕ್ಕಿಗಳು (ರಾಜನೂಕರೆ)

 

ಟ್ಟ, ಚಿತ್ತಾಕರ್ಷಕ, ಕೀಟಭಕ್ಷಕ ಹಕ್ಕಿಗಳು. ಗಂಡು-ಹೆಣ್ಣು ನೋಡಲು ವಿಭಿನ್ನ. ನೊಣ, ದ್ವಿಪತ್ರಕ ಕೀಟಗಳು, ಜೀರುಂಡೆ ಮುಂತಾದ ಚಿಕ್ಕ-ಟ್ಟ ಜೀವಿಗಳೇ ಆಹಾರ. ರೆಂಬೆಗಳ ಕವಲುಗಳಲ್ಲಿ, ಹುಲ್ಲು-ನಾರುಗಳನ್ನು ಜೇಡರ ಬಲೆಯಲ್ಲಿ ಅಂಟಿಸಿ ತಯಾರಾದ ಅಚ್ಚುಕಟ್ಟಾದ ಸಣ್ಣ ಗೂಡು.

 

246. Asian Paradise-Flycatcher (Terpsiphone paradisi) Paradise Flycatcher LM Bulbul+/- ರಾಜಹಕ್ಕಿ (ರಾಜನೂಕರೆ)

20 ಸೆಂಮೀ. ಭಾರತದ ಅತಿ ಸುಂದರ ಹಕ್ಕಿ. ಗಂಡಿಗೆ, ಕಡು ನೀಲಿಗ್ಪ ತಲೆ, ಜುಟ್ಟು, ಗಲ್ಲ; ಹೊಳೆಯುವ ಅಚ್ಚಬಿಳಿ ದೇಹ; ರೆಕ್ಕೆಯಲ್ಲಿ, ಕ್ಪ; ಎಲ್ಲಕ್ಕಿಂತ ಮಿಗಿಲಾಗಿ, 50 ಸೆಂಮೀ. ಉದ್ದನಾದ ಬಾಲದ ಎರಡು ಬಿಳಿ ಗರಿಗಳು. ಹೆಣ್ಣಿಗೆ ಮತ್ತು ಎಳೆವಯಸ್ಸಿನ ಗಂಡು ಹಕ್ಕಿಗೆ, ಕೆಂಗಂದು ಮೇಲ್ಮೈ; ಕ್ಪ ತಲೆ; ಬಿಳಿ ಕೆಳಮೈ. ಎಳೆವಯಸ್ಸಿನ ಗಂಡು ಹಕ್ಕಿಗೆ ಕೆಂಗಂದು ಬಾಲವಿದ್ದರೆ, ಹೆಣ್ಣಿಗೆ ಬಾಲದ ಗರಿಗಳಿಲ್ಲ. ಒಂದು ಒಳಜಾತಿಯ ರಾಜಹಕ್ಕಿ ಬಿಳಿ ದೇಹವನ್ನು ಹೊಂದುವುದೇ ಇಲ್ಲ. ಜೋಡಿಯಾಗಿ, ಉದುರೆಲೆ, ಬಿದಿರುಕಾಡುಗಳಲ್ಲಿ, ತೋಟ, ಜನವಸತಿ ಪ್ರದೇಶಗಳಲ್ಲಿ ಮರ, ದೆ ಹಾಗೂ ಬಿದಿರುಮೆಳೆಗಳ ನಡುವೆ ಕಾಣಬಹುದು. ಚಾಕಚಕ್ಯತೆಯಿಂದ ಅತ್ತಿಂದಿತ್ತ ನಲಿಯುತ್ತ ಹಾರಾಡುವಾಗ, ಗಂಡುಹಕ್ಕಿಯ ರಿಬ್ಬನಿನಂತಹ ಬಾಲಗಳು ಮನಮೋಹಕ! ಚ್.ಚ್ಯು.. ಕೂಗು.