Prinias and Warblers  (Muscicapidae: Sylviinae)

 

ಉಲಿಯಕ್ಕಿಗಳು (ಚಿಟ್ಟೆಪಕ್ಷಿ)

 

ಪೇಲವ ಬಣ್ಣ ಹೊಂದಿರುವ, ಸರ್ವದಾ ಚಟುವಟಿಕೆಯಿಂದ ಜೊಂಡು, ಕುರುಚಲು, ತೆಳುಗಾಡುಗಳಲ್ಲಿ, ಮರಗಿಡದೆಗಳಲ್ಲಿ ಅಡ್ಡಾಡುವ ಚಿಕ್ಕ ಹಕ್ಕಿಗಳು. ದುರ್ಬಲವಾದ, ತೆಳುವಾದ, ಚೂಪಾದ ಕೊಕ್ಕು; ಸಣ್ಣ ಕಾಲು; ಗುಂಡಾದ ರೆಕ್ಕೆ. ಸೋಮಾರಿಗಳಂತೆ ಸದಾ ಅವಿತು ಕೂತಂತೆ ಕಂಡರೂ, ಎಲೆಗಳ ನಡುವೆ ಹಿಡಿದ ಕೀಟ, ಕಂಬಳಿಹುಳ, ಇರುವೆ, ಹಣ್ಣು ಮತ್ತು ಮಕರಂದ ಇವೇ ಆಹಾರ. ನೋಡಲು ಎಲ್ಲವೂ ಒಂದೇ ರೀತಿ ಇರುವುದರಿಂದ, ಅವುಗಳ ವಿಶಿಷ್ಟ ಸ್ವರದಿಂದ, ಮೃದುವಾದ ಇಂಚರದಿಂದ ಪತ್ತೆ ಹಚ್ಚಬೇಕಾಗುವುದು. ನೆರಳಿರುವೆಡೆ, ನೆಲದ ಮೇಲೆಯೋ, ಗಿಡಗಂಟಿಗಳ ದೆಗಳಲ್ಲಿಯೋ, ಉಬ್ಬಿದ ಅಥವಾ ಬಟ್ಟಲಿನ ಆಕಾರದ ಗೂಡು.

 

248. Plain Prinia (Prinia inornata) Plain Wren Warbler R Sparrow- ಉಲಿಯಕ್ಕಿ (ಚಿಟ್ಟೆಪಕ್ಷಿ)

13 ಸೆಂಮೀ. ತಿಳಿಗಂದು ಮೇಲ್ಮೈ; ಬಿಳಿ ಹುಬ್ಬು; ಪೇಲವ ಕೆಳಮೈ; ಉದ್ದ ಪಟ್ಟೆ ಬಾಲದ ತುದಿಯಲ್ಲಿ ಕ್ಪ ಮತ್ತು ಬಿಳಿಯಂಚು. ಜೋಡಿಯಾಗಿ, ಒಣ ಕುರುಚಲು, ಹುಲ್ಲುಗಾಡುಗಳಲ್ಲಿ, ಕುಪ್ಪಳಿಸುತ್ತ ಬೇಟೆಯರಸುತ್ತವೆ. ಟೀಟೀಟೀಟೀ ಕೀಟದ ಕೂಗು.