26. Eurasian Spoonbill (Platalea leucorodia) Spoonbill RM Duck+/-  ಚಮಚದ ಕೊಕ್ಕು (ಚಮಚಕೊಕ್ಕ)

60 ಸೆಂಮೀ. ಅಚ್ಚ ಬಿಳಿ ಮೈಯಲ್ಲಿ, ಕಿತ್ತಳೆ-ಕ್ಪ ಬಣ್ಣದ, ನೀಳವಾದ ಚಪ್ಪಟೆ ಕೊಕ್ಕಿಗೆ ಚಮಚದ ಆಕಾರದ ತುದಿ ಮತ್ತು ಕ್ಪ ಕಾಲುಗಳು. ಕತ್ತಿನ ಕೆಳಭಾಗದಲ್ಲಿ ಬೂದು ಹಳದಿ-ಕಿತ್ತಳೆ ಪಟ್ಟಿ; ಕಿತ್ತಳೆ ಬಣ್ಣದ ಗಂಟಲು ಮಚ್ಚೆ; ಸಂತಾನಋತುವಿನಲ್ಲಿ ನೆತ್ತಿಯ ಮೇಲೆ ಚೂಪಾದ ಬಿಳಿ ಗರಿಗಳು ಮೂಡುತ್ತವೆ. ಚಮಚದ ಕೊಕ್ಕನ್ನು ಅತ್ತಿಂದಿತ್ತ ಆಡಿಸುತ್ತ ನೀರಿನಲ್ಲಿರುವ ಜಲಚರಗಳನ್ನು ಜರಡಿಯಾಡುತ್ತ ಹಿಡಿಯುತ್ತದೆ. ಸಮೂಹ ಜೀವನ.