Thrushes, Shortwings, Robins  (Muscicapidae: Turdinae)

 

ಮಡಿವಾಳ, ಚಟಕ ಮತ್ತು ಸಿಳ್ಳಾರಗಳು (ಮಡಿವಾಳ)

 

ದುಂಡು ದೇಹದ, ತೆಳುವಾದ ಕೊಕ್ಕಿನ, ದಷ್ಟಷ್ಟ ಕಾಲು-ಪಾದಗಳ; ಮರ ಮತ್ತು ನೆಲದ ಮೇಲೆ ಜೀವಿಸುವ ಹಕ್ಕಿಗಳು. ಗಂಡು-ಹೆಣ್ಣು ನೋಡಲು ವಿಭಿನ್ನ. ಮಿಶ್ರಾಹಾರಿಗಳು. ಕೆಲವು ಜಾತಿಯವು ಮಧುರ ಗಾಯಕರೂ ಕೂಡ. ಮರದ ಕೊಂಬೆ, ಕಾಂಡದ ಮೇಲೆ ಇರುವ ರಂಧ್ರ, ಅಥವಾ ಬರೇ ನೆಲದ ಮೇಲೆ ಹುಲ್ಲು, ನಾರು-ಬೇರುಗಳಿಂದ ಕೂಡಿದ ಮೃದುವಾದ, ಬಟ್ಟಲಿನಂತಹ ಗೂಡು.

 

264.  Oriental Magpie-Robin (Copsychus saularis) Magpie Robin R Bulbul ಮಡಿವಾಳ (ಮಡಿವಾಳ)

 

 

20 ಸೆಂಮೀ. ಹೆಸರೇ ಹೇಳುವಂತೆ, ಅಗಸರು ಬಟ್ಟೆ ಒಗೆಯುವ ಕಟ್ಟೆಗಳ ಬಳಿ, ಮನುಷ್ಯರ ಸುತ್ತ-ಮುತ್ತಲ ಪರಿಸರದಲ್ಲಿ ವಾಸಿಸುವ ಅಚ್ಚ ಕ್ಪ-ಬಿಳಿ ಹಕ್ಕಿ. ಕಡು ನೀಲಿಗ್ಪ ದೇಹ; ರೆಕ್ಕೆಯ ಮೇಲೆ, ಬಾಲದ ಹೊರಗರಿಗಳಲ್ಲಿ ಮತ್ತು ಕೆಳಮೈ ಬಿಳಿ. ಹೆಣ್ಣಿಗೆ, ಕಪ್ಪಿರುವೆಡೆ ಬೂದು. ಒಂಟಿಯಾಗಿ, ಉದುರೆಲೆ, ಕುರುಚಲು ಕಾಡು, ಹೂದೋಟ ಮತ್ತು ಜನವಸತಿ ಪ್ರದೇಶಗಳಲ್ಲಿ ವಾಸ. ಅತ್ತಿಂದಿತ್ತ ಕುಪ್ಪಳಿಸಿಕೊಂಡು, ಒಂದೊಂದು ಬಾರಿಗೂ ಬಾಲವನ್ನು ಮೀಟುತ್ತಾ, ನೆರಳಿರುವೆಡೆ, ಕ್ರಿಮಿ-ಕೀಟ, ಹಣ್ಣು-ಮಕರಂದದ ಬೇಟೆ. ಉಳಿದ ವೇಳೆ ಹೆಚ್ಚು ಶಬ್ದ ಮಾಡದಿದ್ದರೂ, ಸಂತಾನಋತುವಿನಲ್ಲಿ ಗಂಡುಹಕ್ಕಿಗೆ ಎಲ್ಲಿಲ್ಲದ ಸಂಭ್ರಮ! 8-20 ಸ್ವರಗಳ ಇಂಪಾದ ಹಾಡು; ಕಿಸಬಾಯಿದಾಸನಂತೆ, ಬೆಳಗ್ಗಿನಿಂದ ಸಂಜೆಯವರೆಗೆ ಅದೇ ರಾಗ, ಅದೇ ಹಾಡು.