266. White-rumped Shama (Copsychus malabaricus) Shama R Bulbul ಶಾಮ

 

25 ಸೆಂಮೀ. ಹಾಡುಗಾರರಲ್ಲೆಲ್ಲ ಅತಿ ಸುಶ್ರಾವ್ಯ ಗಾಯಕ. ಗಂಡಿಗೆ ಹೊಳೆಯುವ ಕ್ಪ ಮೇಲ್ಮೈ, ತಲೆ, ಗಂಟಲು, ಎದೆ; ಕೆಂಗಂದು ಕೆಳಮೈ; ಅಚ್ಚಬಿಳಿ ಪೃಷ್ಠ ಮತ್ತು ಉದ್ದವಾದ ಬಾಲದ ಅಂಚು. ಹೆಣ್ಣಿಗೆ ಕಪ್ಪಿರುವಲ್ಲೆಲ್ಲಾ ಬೂದುಗಂದು. ಸದಾಹಸಿರು, ಉದುರೆಲೆ ಮತ್ತು ತಿಳಿಗಾಡುಗಳಲ್ಲಿ, ಎಸ್ಟೇಟುಗಳಲ್ಲಿ, ನೆರೆಳಿರುವೆಡೆ ಬೇಟೆ. ಅತ್ಯಂತ ಮಧುರವಾದ ಸ್ವರಗಳ ಸಿಳ್ಳೆ ಹಾಡಿನ ಗಾಯನ.