267. Eurasian Blackbird (Turdus merula) Blackbird R Myna ಕ್ಪಹಕ್ಕಿ (ಕರ್ತಪಕ್ಷಿ)

25-27 ಸೆಂಮೀ. ಗಂಡಿನ ಕಡುಬೂದು ದೇಹಕ್ಕೆ ಕ್ಪ ತಲೆ; ಕಿತ್ತಳೆ-ಹಳದಿ ಕೊಕ್ಕು, ಕಾಲು ಮತ್ತು ಕಣ್ಣಿನ ಸುತ್ತ ಉಂಗುರ; ತಿಳಿ ಬೂದುಗಂದು ಕೆಳಮೈ. ಹೆಣ್ಣಿಗೆ ತುಸು ಪೇಲವ; ಬೂದು ಗಂಟಲ ಮೇಲೆ ಕಂದು ಗೀರುಗಳು. ಒಂಟಿಯಾಗಿ, ಕಾಡಿನ ನೆಲದ ಮೇಲೆ ಅಥವಾ ಕೊಂಬೆಗಳ ಮೇಲೆ ಅಡ್ಡಾಡುತ್ತವೆ. ನೇರ-ವೇಗದ ಹಾರಾಟ. ಕೆಳಬಿದ್ದ ಹಣ್ಣುಗಳು, ಕ್ರಿಮಿ-ಕೀಟ, ಎರೆಹುಳಗಳೇ ಆಹಾರ. ಸಂತಾನಋತುವಿನಲ್ಲಿ ಗಂಡಿನ ಸುಶ್ರಾವ್ಯ ಅಣಕು ಹಾಡುಗಳು. ಬೇರುನಾರುಗಳನ್ನು ಮಣ್ಣಿನೊಂದಿಗೆ ಬೆರೆಸಿದ ಹೂರಣದಿಂದ ರೆಂಬೆಗಳ ಮೇಲೆ ಗೂಡು.

 

Eurasian Blackbird, Blackcapped Spp. (Turdus merula nigropileus) ಕ್ಪತಲೆಯ ಕ್ಪಹಕ್ಕಿ 25 ಸೆಂಮೀ. ಕೆಂಬೂದು ಮೈ, ಬೂದು ರೆಕ್ಕೆಗಳು, ಕ್ಪ ತಲೆ ಮತ್ತು ಮಾಸಲು ಬಿಳಿ ಹೊಟ್ಟೆ. ಉಳಿದೆಲ್ಲ 267ರಂತೆ.