Geese and Ducks (Anatidae)

 

ಬಾತುಕೋಳಿಗಳು (ಹೆಬ್ಬಾತ್, ಬಾತ್)

 

ಮೊಂಡಾದ, ಚಪ್ಪಟೆಯಾದ, ಜಾಲರಿಯಂತ ಕೊಕ್ಕುಳ್ಳ, ನೀರಿನಲ್ಲಿ ಗುಂಪಾಗಿ ವಾಸಮಾಡುವ ಹಕ್ಕಿಗಳು. ಈಜಾಡಲು ಜಾಲಪಾದಗಳುಳ್ಳ ಚಿಕ್ಕ ಕಾಲುಗಳು; ಪ್ರಬಲವಾದ ಹಾಗೂ ದೂರದ ಹಾರಾಟಕ್ಕೆ ತಕ್ಕುದಾದ ಸಣ್ಣ, ಸರ, ಸದೃಢ ಹಾಗೂ ಚೂಪಾದ ರೆಕ್ಕೆಗಳು; ಚಿಕ್ಕ ಬಾಲ. ನೆಲದ ಮೇಲೆ ಅಥವ ಮರದ ಟರೆಗಳೊಳಗೆ ಗೂಡು. ಹಲವು ಜಾತಿಯವು ವಲಸೆ ಬರುವ ಹಕ್ಕಿಗಳು. ನೀರಿನಲ್ಲಿ ತಾಯಿಯೊಂದಿಗೆ ಮರಿಗಳು ಸಾಲಾಗಿ ಈಜಿಕೊಂಡು ಹೋಗುವುದನ್ನು ನೋಡಲು ಬಲು ಚೆಂದ.

 

27. Bar-headed Goose (Anser indicus) M Duck+ ಪಟ್ಟೆತಲೆ ಹೆಬ್ಬಾತು (ಹೆಬ್ಬಾತ್)

75 ಸೆಂ.ಮೀ. ಪ್ರಪಂಚದ ಅತಿ ಎತ್ತರ ಹಾರಬಲ್ಲ ಪಕ್ಷಿ. ಕ್ಪ ತುದಿಯಿರುವ ಹಳದಿ ಕೊಕ್ಕು; ಬೂದು ಮೈ; ಬಿಳಿ ತಲೆ; ಹಳದಿ ಕಾಲುಗಳು; ತಿಳಿಗುಲಾಬಿ ಜಾಲಪಾದಗಳು; ಹಿಂಗತ್ತಿನಲ್ಲಿ ಎರಡು ಕ್ಪ ಪಟ್ಟಿಗಳು; ಹಾರುವಾಗ ರೆಕ್ಕೆಯ ತುದಿಗಳಲ್ಲಿ ಕ್ಪ ಎದ್ದು ಕಾಣುವುದು; ಕಂದು ಕತ್ತಿನ ಎರಡೂ ಬದಿಗಳಲ್ಲಿ ನೀಳ ಬಿಳಿ ಪಟ್ಟಿ. ಒಟ್ಟಿಗೆ ಎತ್ತರದಲ್ಲಿ ಹಾರುವಾಗ V ಆಕಾರ. ಹೆಚ್ಚಾಗಿ ನಿಶಾಚರ. ಎಳೆಪೈರು, ಕಾಂಡ, ಕಾಳು, ಗೆಡ್ಡೆಗಳು ಆಹಾರ. ಆನ್ಗ್..ಆನ್ಗ್.. ಕೂಗು. 18,000 ಅಡಿ ಎತ್ತರದ ಲಡಾಕ್, ಟಿಬೆಟ್ಟಿನಿಂದ, ಚಳಿಗಾಲದ ವಲಸೆಗಾರ.