271.  Black Redstart (Phoenicurus ochruros) M Sparrow ಅದುರುಬಾಲ

15 ಸೆಂಮೀ. ಗಂಡಿಗೆ ಕ್ಪ ಮೇಲ್ಮೈ, ಎದೆ, ತಲೆ ಮತ್ತು ರೆಕ್ಕೆಗಳು; ಮಸಿಗ್ಪ ನೆತ್ತಿ, ಕೆಳಬೆನ್ನು; ಕೆಂಗಂದು ಕೆಳಮೈ, ಪೃಷ್ಠ ಮತ್ತು ಬಾಲದಂಚು. ಹೆಣ್ಣು ಪೇಲವ ಮತ್ತು ಕಂದು ಛಾಯೆ. ಕುರುಚಲು ಕಾಡು, ಹಳ್ಳಿ, ಹೊಲ-ಗದ್ದೆಯ ಅಂಚಿನಲ್ಲಿ, ತಂತಿ, ಕಂಬ, ಬೊಡ್ಡೆಗಳ ಮೇಲೆ, ಒಂಟಿಯಾಗಿ ಬಾಲವನ್ನು ನಿರಂತರವಾಗಿ ನಡುಗಿಸುತ್ತ ಕೀಟಗಳ ಬೇಟೆ. ತೀಕ್ಷ್ಣ ಟಿಕ್.ಟಿಕ್.ಟಿಕ್. ಕೂಗು. ಹಿಮಾಲಯದಾಚೆಯಿಂದ ನಮ್ಮಲ್ಲಿಗೆ ಬರುವ ಚಳಿಗಾಲದ ವಲಸೆಗಾರ.