273. Blue Rock-Thrush (Monticola solitarius) M Bulbul ಬಂಡೆಸಿಳ್ಳಾರ

23 ಸೆಂಮೀ. ಗಂಡಿಗೆ ಅಚ್ಚ ನೀಲಿ ದೇಹ, ತುಸು ಗಾಢ ನೀಲಿ ರೆಕ್ಕೆ ಮತ್ತು ಬಾಲ; ಬಿಳಿ ಕೆಳಮೈ. ಹೆಣ್ಣಿಗೆ, ಮಾಸಲು ಬೂದು ಮೇಲ್ಮೈ ಮತ್ತು ಪೇಲವ ಬಿಳಿ ಕೆಳಮೈ ಮೇಲೆ ಕಂದು ಗೀರುಗಳು. ಒಂಟಿಯಾಗಿ, ಬಂಡೆ ಪ್ರದೇಶ, ಪಾಳು ಬಿದ್ದ ಕಟ್ಟಡ ಮತ್ತು ಅವುಗಳ ಸುತ್ತ ಒಣಕೊಂಬೆಯ ತುದಿಗಳಲ್ಲಿ ಕುಳಿತಿರುತ್ತವೆ. ನೆಲದ ಮೇಲೆ ಹಣ್ಣು, ಕೀಟಗಳ ಬೇಟೆ. ಕಾಶ್ಮೀರ, ರವಾಲ್ನಿಂದ ಚಳಿಗಾಲದ ವಲಸೆಗಾರ.