275. White-throated Ground-Thrush (Zoothera citrina cyanotus) R Myna ಬಿಳಿಗಲ್ಲದ ನೆಲಸಿಳ್ಳಾರ (ಕೊಕ್ಕೆಲೆಪಕ್ಷಿ)

 

21 ಸೆಂಮೀ. ಗಂಡಿಗೆ ಹಳದಿಗಂದು ತಲೆ, ಕತ್ತು ಮತ್ತು ಕೆಳಮೈ; ಬೂದು ನೀಲಿ ಮೇಲ್ಮೈ; ಬಿಳಿ ಕೆನ್ನೆ ಮತ್ತು ಗಂಟಲಿನ ಮೇಲೆ ಕ್ಪ ಪಟ್ಟಿಗಳು; ರೆಕ್ಕೆಗಳಲ್ಲಿ ದೊಡ್ಡ ಬಿಳಿ ಮಚ್ಚೆ. ಹೆಣ್ಣಿಗೆ ಬೂದು ನೀಲಿಯಿರುವೆಡೆ ತಿಳಿಹಸಿರು. 269ರಂತೆ ಸ್ವಭಾವ. ಸಂತಾನಋತುವಿನಲ್ಲಿ ಗಂಡಿನ ಸುಶ್ರಾವ್ಯ ಸ್ವರಗಳ ಹಾಡಿನ ಮಧ್ಯೆ ಇತರ ಹಕ್ಕಿಗಳ ಅಣಕುಸ್ವರಗಳು. ಮರದ ಮೇಲೆ, ಮಣ್ಣಿನಿಂದ ತಯಾರಾದ, ಹುಲ್ಲು, ನಾರು-ಬೇರುಗಳಿಂದ ಕಟ್ಟಿದ ಗೂಡು.