276.  Malabar Whistling-Thrush (Myiophonus horsfieldii) R Myna+ ಸರಳೆಸಿಳ್ಳಾರ (ಕಾಕೆಪಕ್ಷಿ)

25 ಸೆಂಮೀ. ಕಡುನೀಲಿಗ್ಪ ದೇಹ; ಹೊಳೆಯುವ ನೀಲಿ ಹಣೆ, ಭುಜಮಚ್ಚೆ; ಜೋಡಿಯಾಗಿ ಸದಾಹಸಿರು ವನಗಳ ಝರಿ-ತೊರೆ-ಜಲಪಾತಗಳ ಸುತ್ತಮುತ್ತ ವಾಸ. ಮುಂಜಾನೆ ಮಂಜು ಮುಸುಕಿದ ವಾತಾವರಣದಲ್ಲಿ, ಕಾಣುವುದಕ್ಕಿಂತ ಕೇಳುವುದೇ ಹೆಚ್ಚು. ಮೃದ್ವಂಗಿ, ಕಶೇರುಕ, ಕಪ್ಪೆಗಳೂ ಆಹಾರ. ಉಳಿದವೇಳೆ ನಿಶ್ಶಬ್ದವಾಗಿದ್ದು ಪ್ರಜನನ ಕಾಲದಲ್ಲಿ ಶಾಲೆಗೆ ಚಕ್ಕರ್ ಹೊಡೆದು ಅಡ್ಡಾಡುವ ಲಿಕಿಟ್ಟಿಯಂತೆ, ಬಲು ನೀಳವಾದ, ಏರಿಳಿತಗಳಿರುವ ಸ್ವರಗಳ, ಅದ್ಭುತ ಸಿಳ್ಳೆ. ಬಂಡೆಯ ಅಡಿಗಳಲ್ಲಿ, ನಾರು-ಬೇರುಗಳನ್ನು ಮಣ್ಣಿನಲ್ಲಿ ಕಲಸಿ ಕಟ್ಟಿದ ಬಟ್ಟಲಿನಾಕಾರದ ಗೂಡು.