Tits  (Paridae)

 

ಚೇಕಡಿ ಹಕ್ಕಿಗಳು (ಕ್ರ್ ಕೊಟ್ಟ್0ಬುಡ್ಚ)

 

ಎಡೆಬಿಡದೆ, ಉಲ್ಲಾಸದಿಂದ, ಮರದ ಮೇಲೆ ಅಡ್ಡಾಡುವ, ಬೂದು-ಕ್ಪ-ಬಿಳಿ ಬಣ್ಣದ ಸಣ್ಣ ಹಕ್ಕಿಗಳು. ಸಣ್ಣ, ಗಟ್ಟಿಮುಟ್ಟಾದ, ಚೂಪಾದ ಕೊಕ್ಕು; ಸಣ್ಣ, ಶಕ್ತಿಯುತ ಕಾಲುಗಳು; ಗುಂಡಾದ ಟ್ಟ ರೆಕ್ಕೆಗಳು. ಕೀಟ, ಮರಿಹುಳ, ಮಕರಂದ, ಹಣ್ಣು, ಮೊಗ್ಗು, ಬೀಜಗಳನ್ನರಸುತ್ತ ಮರಗಳ ಮೇಲೆ, ಕೊಂಬೆ-ಎಲೆಗಳ ನಡುವೆ ಸೂಕ್ಷ್ಮವಾಗಿ ಹುಡುಕುತ್ತಾ ಸರ್ಕಸ್ ಮಾಡುತ್ತವೆ. ನೋಡಲು ಚಿಕ್ಕವಾದರೂ, ಹಿಂಸ್ರ ಪಕ್ಷಿಗಳು ಗೂಡಿನ ಬಳಿ ಬಂದರೆ ಧೈರ್ಯದಿಂದ ಎದುರಾಡಿ ಓಡಿಸುತ್ತವೆ! ಮರದ ಟರೆ, ಕಟ್ಟಡಗಳ ರಂಧ್ರಗಳಲ್ಲಿ ಗೂಡು.

278. Great Tit (Parus major) Grey Tit R Sparrow- ಬೂದು ಚೇಕಡಿ (ಕ್ರ್ ಕೊಟ್ಟ್0ಬುಡ್ಚ )

 

13 ಸೆಂಮೀ. ಗುಂಡಾದ, ಅಚ್ಚಗ್ಪ ತಲೆ, ಗಲ್ಲ, ಎದೆ; ಬಿಳಿ ಕೆನ್ನೆ, ಹಿಂಗತ್ತು; ಬೂದು ಬೆನ್ನು; ಬಿಳಿ ಕೆಳಮೈ ಮಧ್ಯೆ ಕ್ಪ ಪಟ್ಟಿ; ಬೂದು ರೆಕ್ಕೆಯಲ್ಲಿ ಬಿಳಿ ಪಟ್ಟಿ; ಕ್ಪ ಬಾಲಕ್ಕೆ ಬಿಳಿ ಅಂಚು. ಜೋಡಿಯಾಗಿ, ಉದುರೆಲೆ, ಕುರುಚಲು ಕಾಡಂಚುಗಳಲ್ಲಿ, ತೋಟಗಳಲ್ಲಿ ಕಾಣಬಹುದು. ಕಾಳುಗಳನ್ನು ಕಾಲಿನಲ್ಲಿ ಹಿಡಿದು, ಕೊಕ್ಕಿನಿಂದ ಕುಕ್ಕಿ ತಿನ್ನುತ್ತವೆ. ಹಾರಾಡುವಾಗ ಸಂತೋಷದ ಕಿರುಚಾಟ.