28.  Spot-billed Duck (Anas poecilorhyncha) Spotbill, Grey Duck RM Duck ವರಟೆ (ಸರಳೆ)

61 ಸೆಂಮೀ. ಕಡುಗಂದು ಬಣ್ಣದ ದೇಹಕ್ಕೆ, ಬಿಳಿ ಅಂಚುಳ್ಳ ಗರಿಗಳು; ಕ್ಪ ಕೊಕ್ಕಿಗೆ ಹಳದಿ ತುದಿ ಮತ್ತು ಗಂಡುಹಕ್ಕಿಯ ಕೊಕ್ಕಿನ ಬುಡದಲ್ಲಿ ಎರಡು ಕೆಂ ಮಚ್ಚೆಗಳು; ಅಚ್ಚಗೆಂ ಕಾಲುಗಳು; ಕಡುಗಂದು ಮೋಟುಬಾಲ. ಜೌಗು ಹಾಗೂ ನೀರಿರುವ ಗದ್ದೆಗಳಲ್ಲಿ ಕಾಣಬಹುದು. ತೆನೆಗೂಡಿದ ಭತ್ತಕ್ಕೆ ಹಾನಿಯುಂಟುಮಾಡಲೂಬಹುದು. ಸಸ್ಯಾಹಾರದ ಜೊತೆಗೆ ಮೃದ್ವಂಗಿಗಳು, ಜಲಕೀಟಗಳೂ ಆಹಾರ. ನೇರವಾಗಿ ಮರಿಗಳಿಗೆ ಗುಟುಕು ನೀಡುವುದಿಲ್ಲ, ಬದಲಿಗೆ ಅವುಗಳಿಗೆ ಆಹಾರದತ್ತ ಮಾರ್ಗದರ್ಶನ ನೀಡುತ್ತದೆ. ಮರಿಗಳು ಸಾಲಾಗಿ ಅಮ್ಮನ ಹಿಂದೆ ಹೋಗುವುದನ್ನು ನೋಡಲು ಬಲು ಚಂದ!