Nuthatches (Sittidae)
ಮರಗುಬ್ಬಿಗಳು (ಮರಚುಂಡೆ)
ಹೆಚ್ಚಾಗಿ ಮರಗಳ ಮೇಲೆ, ವಿರಾಮರಹಿತವಾಗಿ ಓಡಾಡುವ ಸಣ್ಣ ಗಾತ್ರದ ಹಕ್ಕಿಗಳು. ಸರವಾದ, ಸಣ್ಣ ಕೊಕ್ಕು; ಸಣ್ಣ ಕಾಲುಗಳಾದರೂ, ಮರವನ್ನು ಅವಚಿಕೊಳ್ಳಲು ಅಗಲವಾದ ಪಾದ; ಉದ್ದನಾದ, ಚೂಪಾದ ರೆಕ್ಕೆಗಳು; ಮೊಂಡು ಬಾಲ. ಅಲೆಯಂತಹ ಹಾರಾಟ; ಮರಗಳ ಮೇಲೆ ಕುಪ್ಪಳಿಸುತ್ತ ಹತ್ತುವ ಸ್ವಭಾವ, ಹಾಗೆಯೇ ತಲೆಕೆಳಕಾಗಿ ಇಳಿಯುತ್ತಾ, ಜೇಡ, ಕ್ರಿಮಿ-ಕೀಟ, ಕಾಳು-ಬೀಜಗಳನ್ನು ಹೆಕ್ಕಿ ತಿನ್ನುತ್ತವೆ. ಮರದ ರಂಧ್ರಗಳಿಗೆ ಮಣ್ಣು ಮೆತ್ತಿ, ಒಳಗೆ ಎಲೆ, ಹಾವಸೆ, ಹತ್ತಿಯಿಂದ ತಯಾರಾದ ಗೂಡು.
280. Chestnut-bellied Nuthatch (Sitta castanea) R Sparrow- ಕೆಂ ಮರಗುಬ್ಬಿ (ಚೋಂದ ಮರಚುಂಡೆ)
12 ಸೆಂಮೀ. ಮಾಸಲು ನೀಲಿ ಮೇಲ್ಮೈ; ಕಣ್ಣಿಗೆ ಕ್ಪಪಟ್ಟಿ; ಬಿಳಿ ಕೆನ್ನೆ, ಗಂಟಲು; ಕಡು ಕೆಂಗಂದು ಕೆಳಮೈ; ಚಿಕ್ಕ ಕ್ಪ ಬಾಲದ ಮಧ್ಯೆ ಬಿಳಿ. ಹೆಣ್ಣಿಗೆ ತಿಳಿ ಕೆಂಗಂದು ಕೆಳಮೈ. ಜೋಡಿಯಾಗಿ, ಕಾಡು, ಎಸ್ಟೇಟುಗಳಲ್ಲಿ, ಮರದ ಕಾಂಡದ ಮೇಲೆ-ಕೆಳಗೆ ಓಡಾಡಿಕೊಂಡು ಬೇಟೆಯಾಡುತ್ತದೆ. ಚಿಲ್ಪ್.ಚಿಲ್ಪ್.. ಮೆದುಕೂಗು.
Leave A Comment