Wagtails and Pipits (Motacillidae)

 

ಸಿಪಿಲೆ (ಬಾಲಾಟಿಮೊಣ್ಣಿ)  ಮತ್ತು ಪಿಪಿಳೀಕಗಳು (ಪಿಪ್ಪಿಲಿ)

 

 

ಹೆಚ್ಚಾಗಿ ನೆಲದ ಮೇಲೆ ಓಡಾಡುವ, ನೀರಿನ ಬಳಿ ವಾಸಿಸುವ ಈ ಬುಲ್ಬುಲ್ ಗಾತ್ರದ ಹಕ್ಕಿಗಳಿಗೆ, ಸರವಾದ ಮೈ; ಚೂಪಾದ ರೆಕ್ಕೆಗಳು;  ಉದ್ದವಾದ ಕಾಲುಗಳು ಮತ್ತು ಉದ್ದ ಬಾಲ. ಆ ಬಾಲವನ್ನು ಓಡಾಡುವಾಗೆಲ್ಲ ಮೇಲೆ-ಕೆಳಗೆ ಆಡಿಸಿಕೊಂಡು ತಿರುಗುವ ಹವ್ಯಾಸ. ನೀರಿನ ಬಳಿ, ಹುಲ್ಲಿನ ಮಧ್ಯೆ ಅಡಗಿರುವ ಕೀಟಗಳೇ ಆಹಾರ. ್ವ.. ಸಿ.ಸಿ.ಸಿ. ಎಂದು ಉಲ್ಲಾಸಭರಿತ ಸಿಳ್ಳೆಹಾಡು. ಒಂದು ಪ್ರಭೇದವನ್ನು ಬಿಟ್ಟರೆ, ಉಳಿದೆಲ್ಲವೂ ಹಿಮಾಲಯದಿಂದ ನಮ್ಮಲ್ಲಿಗೆ ವಲಸೆ ಬರುವ ಚಳಿಗಾಲದ ಅತಿಗಳು. ಸೆಪ್ಟೆಂಬರ್ನಲ್ಲಿ ಬಂದರೆ, ಮಾರ್ಚ್-ಏಪ್ರಿಲ್ಗೆ ನಿರ್ಗಮನ.

 

ಇನ್ನು ಪಿಪಿಳಕಗಳು ತೆಳ್ಳನೆಯ ಮೈಯ್ಯುಳ್ಳ, ಹೆಣ್ಣುಗುಬ್ಬಚ್ಚಿಯಂತೆ ಕಾಣುವ, ನೆಲದ ಮೇಲೆ ಆಹಾರವನ್ನರಸುವ, ಬೂದುಗಂದು ಬಣ್ಣದ ಚಿಕ್ಕ ಪಕ್ಷಿಗಳು. ಬಿಳಿ ಕಣ್ಣಿನ ಹುಬ್ಬು ಗುರುತು ಹಿಡಿಯಲು ಸಹಕಾರಿ. ಶೋಲ ಹುಲ್ಲುಗಾಡುಗಳಲ್ಲಿ, ಭತ್ತದ ಗದ್ದೆಗಳ ಬಳಿ ಸಾಮಾನ್ಯವಾಗಿ ಕಾಣಬಹುದು. ಪಿಪಿಟ್.ಪಿಪಿಟ್. ಎಂಬ ಕೂಗು.

 

 

282.  Large Pied Wagtail (Motacilla maderaspatensis) R Bulbul ಕ್ಪಬಿಳಿ ಸಿಪಿಲೆ (ಕರ್ತ ಬಾಲಾಟಿಮೊಣ್ಣಿ)

 

21 ಸೆಂಮೀ. ನೀರಿರುವೆಡೆ ವಾಸವಿರುವ ಅಚ್ಚ ಕ್ಪ-ಬಿಳಿ ಹಕ್ಕಿಗೆ ಕ್ಪ ತಲೆ; ಬಿಳಿ ಹುಬ್ಬು; ಕ್ಪ ಗಂಟಲು, ಎದೆ; ಬಿಳಿ ಕೆಳಮೈ; ರೆಕ್ಕೆಯಲ್ಲಿ ಮತ್ತು ಬಾಲದಂಚು ಬಿಳಿ. ಹೆಣ್ಣಿಗೆ ಕಪ್ಪಿರುವಲ್ಲಿ ತಿಳಿಗಂದು. ನದಿ, ಕೆರೆ, ಕೊಳ, ಕಾಲುವೆಗಳ ಬದಿ, ಜನವಸತಿಯ ಸುತ್ತಮುತ್ತ ನೀರಿರುವೆಡೆ ಉತ್ಸಾಹದಿಂದ, ವೇಗವಾಗಿ, ಅತ್ತಿತ್ತ ಓಡಾಡುತ್ತಾ, ಬಿನ್ನಾಣದಿಂದ ಬಾಲವಾಡಿಸುತ್ತಾ ಕೀಟಗಳನ್ನು ಹೆಕ್ಕುತ್ತದೆ. ಗಂಡಿನ ್ವ.. ಸಿ.ಸಿ.ಸಿ. ಮಧುರ ಸಿಳ್ಳು; ನೀರಿರುವೆಡೆ, ಮನೆಗಳ ಸೂರು-ಸಂದುಗಳಲ್ಲಿ, ಮೃದುವಾದ ಕಪ್ನಂತಹ ಗೂಡು.