288. Paddyfield Pipit (Anthus rufulus) R Sparrow+ ಗದ್ದೆ ಪಿಪಿಳೀಕ (ಬೇಲ್ ಪಿಪ್ಪಿಲಿ)

 

15 ಸೆಂಮೀ. ನೀಳ ದೇಹ ಮತ್ತು ಕೊಕ್ಕು; ಬೂದುಗಂದು ಮೇಲ್ಮೈ; ಬಿಳಿ ಹುಬ್ಬು; ಪೇಲವ ಕೆಳಮೈ; ಕುತ್ತಿಗೆ-ಎದೆಯ ಮೇಲೆ ಕಂದು ಗೀರುಗಳು; ಕಡುಗಂದು ಬಾಲದಲ್ಲಿ ಹಾರುವಾಗ ಎದ್ದು ಕಾಣುವ ಬಿಳಿಯಂಚು. ಬಂಡೆ, ಮೈದಾನ ಪ್ರದೇಶ, ಗೋಮಾಳ, ಕೃಷಿಭೂಮಿಯ ನೆಲದ ಮೇಲೆ ವೇಗವಾಗಿ ಅತ್ತಿಂದಿತ್ತ ಚಲಿಸುತ್ತ, ಕೀಟಗಳನ್ನು ಹೆಕ್ಕುವುದನ್ನು ಕಾಣಬಹುದು. ನಿಧಾನವಾಗಿ ಬಾಲವಾಡಿಸುವುದೂ ಉಂಟು. ಪಿಪಿಟ್.ಪಿಪಿಟ್.. ಕೂಗು; ಗಂಡಿನ ಹಾರುಸಿಳ್ಳೆ.