Flowerpeckers  (Dicaeidae)

 

ಬದನಿಕೆಗಳು (ಚುಂಡೆಪಕ್ಷಿ)

 

ಭಾರತದ ಅತಿಚಿಕ್ಕ ಗಾತ್ರದ ಹಕ್ಕಿಗಳ ಕುಟುಂಬ. ಪೇಲವ ಬಣ್ಣ. ಮರದ ಮೇಲೇ ವಾಸ. ತೆಳುವಾದ, ಗಟ್ಟಿಮುಟ್ಟಾದ, ಚಿಕ್ಕ ಕೊಕ್ಕು; ಉದ್ದ ರೆಕ್ಕೆಗಳು; ಚಿಕ್ಕ ಕಾಲುಗಳು; ಟ್ಟ ಬಾಲ. ಕೀಟ, ಹಣ್ಣುಗಳು, ಮಕರಂದವೇ ಆಹಾರ, ಅದರಲ್ಲೂ ಪರಾವಲಂಬಿ ಬಂದಳಿಕೆ ಗಿಡದ ಪರಾಗಸ್ಪರ್ಶ, ಬೀಜಪ್ರಸರಣವಾಗುವುದು ಇವುಗಳಿಂದಲೆ. ಎಡೆಬಿಡದೆ, ಚಡಪಡಿಸುತ್ತಾ, ಅಲ್ಲಿಂದಿಲ್ಲಿಗೆ ಹಾರಾಡುತ್ತವೆ. ಎಲೆಗಳ ಮರೆಯಲ್ಲಿ, ನೇತಾಡುವ ಪರ್ಸ್ ಆಕಾರದ ಗೂಡು.

 

 

292. Thick-billed Flowerpecker (Dicaeum agile) R Sparrow- ದಪ್ಪಕೊಕ್ಕಿನ ಬದನಿಕೆ

 

9 ಸೆಂಮೀ. ಮೇಲ್ಭಾಗವೆಲ್ಲ ಬೂದುಗಂದು; ಗಾಢ ಬೂದು-ನೀಲಿ ಕೊಕ್ಕು; ಮಾಸಲು ಬಿಳಿ ಕೆಳಭಾಗದಲ್ಲಿ ಗೀರುಗಳು; ಕಿತ್ತಳೆ ಬಣ್ಣದ ಕಣ್ಣುಗಳು; ಬಾಲದ ತುದಿ ಬಿಳಿ. ಪರಾವಲಂಬಿ ಬಂದಳಿಕೆ ಹೂವು, ಕಾಯಿಯೆಂದರೆ ಪ್ರಾಣ. ಹಣ್ಣನ್ನು ತಿಂದು ಅಲ್ಲಿಯೇ ಉಗಿಯುವ ರೂಢಿ. ತೀಕ್ಷ್ಣ ಚಿಕ್.ಚಿಕ್. ಕೂಗು.